ಸೂರ್ಲಬ್ಬಿ ಜಲಪಾತದಲ್ಲಿ ಯುವಕರ ತಂಡದ ಹುಚ್ಚಾಟಗಳು, ಅಪಾಯಕಾರಿ ಅಂತ ಗೊತ್ತಿದ್ದರೂ ಸಾಹಸಗಳು

Updated By: ಗಂಗಾಧರ​ ಬ. ಸಾಬೋಜಿ

Updated on: Jun 11, 2025 | 9:18 AM

ಜಲಪಾತಗಳು ಪ್ರಕೃತಿ ನಮಗೆ ಕೊಡಮಾಡುವ ಅತ್ಯಂತ ಸುಂದರ ದೃಶ್ಯಗಳು, ಇವುಗಳನ್ನು ನೋಡಿ ಆನಂದಿಸಬೇಕೇ ಹೊರತು ಅವುಗಳ ಹತ್ತಿರ ಹೋಗಿ ಕುಶಲೋಪರಿ ನಡೆಸುವ ಪ್ರಯತ್ನ ಮಾಡಬಾರದು. ಆದರೆ ಯುವಕ ಯುವತಿಯರಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು, ಫೋಟೋ ತೆಗೆಸಿಕೊಳ್ಳಲು ಇಂಥ ಸ್ಥಳಗಳೇ ಬೇಕು. ಯಾಮಾರಿದರೆ ಅಪಾಯ ಅಂತ ಗೊತ್ತಿದ್ದರೂ ಸಾಹಸ ಮಾಡೋದನ್ನು ಬಿಡಲಾರರು.

ಮಡಿಕೇರಿ, ಜೂನ್ 10: ದುಸ್ಸಾಹಸ ಬೇಡ, ನೀರಿನೊಂದಿಗೆ ಚೆಲ್ಲಾಟವಾಡಬೇಡಿ, ಜಲಪಾತವಿರುವ (waterfalls) ಕಡೆ ಕಲ್ಲುಬಂಡೆಗಳು ಜಾರುತ್ತವೆ ಹತ್ತಿರ ಹೋಗಬೇಡಿ ಅಂತ ಬುದ್ಧಿವಂತರು ಎಷ್ಟು ಬೊಬ್ಬೆ ಹಾಕಿದರೂ ಮೂರ್ಖರಿಗೆ ಅದು ಅರ್ಥವಾಗಲಾರದು. ಇಲ್ನೋಡಿ, ಯುವಕ-ಯುವತಿಯರ ಗುಂಪೊಂದು ಜಿಲ್ಲೆಯ ಸೋಮವಾರಪೇಟೆಗೆ ಹತ್ತಿರವಿರುವ ಸೂರ್ಲಬ್ಬಿ ಜಲಪಾತಕ್ಕೆ ಬಂದಿದೆ. ರಜಾ ಅಥವಾ ಬಿಡುವಿನ ಸಮಯದಲ್ಲಿ ಜನ ಹೀಗೆಲ್ಲ ಸುತ್ತಾಡುತ್ತಾರೆ ಅದು ಬೇರೆ ವಿಷಯ. ಅದರೆ ಜಲಪಾತಗಳು ಇರುವೆಡೆ ಹೀಗೆ ನೀರಿಗಿಳಿಯೋದು, ನೀರು ಹರಿಯುವ ಬಂಡೆಗಳ ಮೇಲಿಂದ ಒಂದು ಕಡೆಯಿಂದ ಮತ್ತೊಂದು ಬದಿಗೆ ಹೋಗೋದು ಅಪಾಯಕ್ಕೆ ಆಹ್ವಾನವಿತ್ತಂತೆ.

ಇದನ್ನೂ ಓದಿ: ಜಲಪಾತಗಳಿಗೆ ಜೀವ ಕಳೆ ತಂದ ಮುಂಗಾರು: ಪ್ರವಾಸಿಗರನ್ನ ಸೆಳೆಯುತ್ತಿದೆ ಮಾಗೋಡು ಫಾಲ್ಸ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 10, 2025 08:32 PM