ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್ ​ ಲಕ್ಷ್ಮೀ ಬರ್ತಾಳೆ

Updated on: Dec 21, 2025 | 9:19 PM

ವಿಪಕ್ಷ ಬಿಜೆಪಿ-ಜೆಡಿಎಸ್‌ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ಬರುವ ಶನಿವಾರದೊಳಗೆ 24ನೇ ಕಂತಿನ ದುಡ್ಡು ಫಲಾನುಭವಿಗಳ ಖಾತೆಗೆ ಸೇರಲಿ.ಇದು ಸಹಜವಾಗಿಯೇ ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪಂಚ ಗ್ಯಾರಂಟಿಯಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಗ್ರಹಣ ಹಿಡಿದಿತ್ತು.

ಬೆಂಗಳೂರು, (ಡಿಸೆಂಬರ್ 21): ವಿಪಕ್ಷ ಬಿಜೆಪಿ-ಜೆಡಿಎಸ್‌ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ಬರುವ ಶನಿವಾರದೊಳಗೆ 24ನೇ ಕಂತಿನ ದುಡ್ಡು ಫಲಾನುಭವಿಗಳ ಖಾತೆಗೆ ಸೇರಲಿ.ಇದು ಸಹಜವಾಗಿಯೇ ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪಂಚ ಗ್ಯಾರಂಟಿಯಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಗ್ರಹಣ ಹಿಡಿದಿತ್ತು. ಚಳಿಗಾಲ ಅಧಿವೇಶನದಲ್ಲಿ ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಟ್ಟು ಬೇರೆ ತಿಂಗಳಿನ ಹಣ ಹಾಕಿದ್ದಾರೆ ಎಂದು ಬಿಜೆಪಿ ಹೋರಾಟ ನಡೆಸಿತ್ತು. 5 ಸಾವಿರ ಕೋಟಿ ರೂಪಾಯಿ ಎಲ್ಲಿ ಹೋಯ್ತು ಎಂದು ಬಿಜೆಪಿ ಪ್ರಶ್ನಿಸಿತ್ತು. ಫೆಬ್ರವರಿ, ಮಾರ್ಚ್‌ ಕಂತು ಬಿಡುಗಡೆಯಾಗದಿರೋದನ್ನ ಟಿವಿ9 ರಿಯಾಲಿಟಿ ಚೆಕ್‌ ಮೂಲಕ ಬಯಲು ಮಾಡಿತ್ತು. ಆದ್ರೆ, ಫೆಬ್ರವರಿ, ಮಾರ್ಚ್ ಕಂತಿನ ಬಗ್ಗೆ ಸಚಿವೆ ಸ್ಪಷ್ಟನೆ ಕೊಟ್ಟಿಲ್ಲ. ಈ ಮಧ್ಯೆ ವಿಪಕ್ಷಗಳು ವಾಗ್ದಾಳಿ ಮುಂದುವರೆಸಿದ್ದು, ಹಿಂದಿನ ಎರಡು ತಿಂಗಳ ಬಾಕಿ ಹಣದ ಕಥೆ ಏನು ಎನ್ನುವುದೇ ಇನ್ನೂ ನಿಗೂಢವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ