AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ದರ ಇಳಿಕೆ; ಬೆಂಗಳೂರಿಗರ ರಿಯಾಕ್ಷನ್ ಇದು

ಜಿಎಸ್​ಟಿ ದರ ಇಳಿಕೆ; ಬೆಂಗಳೂರಿಗರ ರಿಯಾಕ್ಷನ್ ಇದು

ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 04, 2025 | 11:59 AM

Share

GST rationalization decision, reaction of Bengalureans: ಕೇಂದ್ರ ಸರ್ಕಾರ ಜಿಎಸ್​ಟಿ ದರ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸಿದೆ. ನಾಲ್ಕು ಇದ್ದ ಜಿಎಸ್​ಟಿ ಸ್ಲ್ಯಾಬ್​ಗಳನ್ನು ಎರಡಕ್ಕೆ ಇಳಿಸಿದೆ. ಶೇ. 12 ಮತ್ತು ಶೇ. 28ರ ಸ್ಲ್ಯಾಬ್​ಗಳನ್ನು ರದ್ದು ಮಾಡಲಾಗಿದೆ. ಕೇಂದ್ರದ ಈ ಜಿಎಸ್​ಟಿ ಇಳಿಕೆಯ ಕ್ರಮವನ್ನು ಬೆಂಗಳೂರಿಗರು ಸ್ವಾಗತಿಸಿದ್ದಾರೆ. ಜಿಎಸ್​ಟಿ ಸರಳೀಕರಣದಿಂದ ಸಾಕಷ್ಟು ಬೆಲೆ ಕಡಿಮೆ ಆಗಲಿದ್ದು, ಇದರಿಂದ ಜನರಿಗೆ ಹೊರೆ ತಗ್ಗುತ್ತದೆ ಎಂದು ಬೆಂಗಳೂರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 4: ಕೇಂದ್ರ ಸರ್ಕಾರ ಜಿಎಸ್​ಟಿ (gst) ದರ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸಿದೆ. ನಾಲ್ಕು ಇದ್ದ ಜಿಎಸ್​ಟಿ ಸ್ಲ್ಯಾಬ್​ಗಳನ್ನು ಎರಡಕ್ಕೆ ಇಳಿಸಿದೆ. ಶೇ. 12 ಮತ್ತು ಶೇ. 28ರ ಸ್ಲ್ಯಾಬ್​ಗಳನ್ನು ರದ್ದು ಮಾಡಲಾಗಿದೆ. ಶೇ. 5 ಮತ್ತು ಶೇ. 18ರ ಸ್ಲ್ಯಾಬ್ ಮಾತ್ರ ಜಾರಿಯಲ್ಲಿರಲಿವೆ. ಶೇ. 12 ಮತ್ತು ಶೇ. 28 ರಷ್ಟು ಇದ್ದ ಜಿಎಸ್​ಟಿ ದರಗಳನ್ನು ಕ್ರಮವಾಗಿ ಶೇ. 5 ಮತ್ತು ಶೇ. 18ಕ್ಕೆ ಇಳಿಸಲಾಗಿದೆ. ಇದರೊಂದಿಗೆ ಬಹಳಷ್ಟು ಸರಕು ಮತ್ತು ಸೇವೆಗಳ ಬೆಲೆಯಲ್ಲಿ ಗಣನೀಯ ಇಳಿಕೆ ಆಗುತ್ತಿದೆ. ಸೆಪ್ಟೆಂಬರ್ 22ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಕೇಂದ್ರದ ಈ ಜಿಎಸ್​ಟಿ ಇಳಿಕೆಯ ಕ್ರಮವನ್ನು ಬೆಂಗಳೂರಿಗರು ಸ್ವಾಗತಿಸಿದ್ದಾರೆ. ಜಿಎಸ್​ಟಿ ಸರಳೀಕರಣದಿಂದ ಸಾಕಷ್ಟು ಬೆಲೆ ಕಡಿಮೆ ಆಗಲಿದ್ದು, ಇದರಿಂದ ಜನರಿಗೆ ಹೊರೆ ತಗ್ಗುತ್ತದೆ ಎಂದು ಬೆಂಗಳೂರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: Sep 04, 2025 11:57 AM