‘ಕರಿಮಣಿಗೆ ಈಗ ಮತ್ತೆ ಬೆಲೆ ಬಂದಿದೆ’: ವೈರಲ್​ ಹಾಡಿಗೆ ಗುರುಕಿರಣ್ ಪ್ರತಿಕ್ರಿಯೆ

Updated on: Mar 04, 2024 | 10:47 PM

‘ಒಂದು ಕಾಲದಲ್ಲಿ ಕರಿಮಣಿಗೆ ತುಂಬ ಬೆಲೆ ಇತ್ತು. ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸಡನ್​ ಆಗಿ ಕರಿಮಣಿ ಹಾಡಿಗೆ ವ್ಯಾಲ್ಯೂ ಬಂದಿದೆ. ನಮ್ಮ ಕೆಲಸಕ್ಕೆ ಬೆಲೆ ಬಂದಾಗ ಖಂಡಿತಾ ಖುಷಿ ಆಗುತ್ತದೆ’ ಎಂದು ಗುರುಕಿರಣ್​ ಅವರು ಹೇಳಿದ್ದಾರೆ. ‘ಏನಿಲ್ಲ.. ಏನಿಲ್ಲ..’ ಹಾಡು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬಗ್ಗೆ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಗುರುಕಿರಣ್​ (Gurukiran) ಸಂಗೀತ ನಿರ್ದೇಶನ ಮಾಡಿದ ‘ಉಪೇಂದ್ರ’ ಸಿನಿಮಾದ ‘ಏನಿಲ್ಲ.. ಏನಿಲ್ಲ’ (Enilla Enilla) ಹಾಡು ಇತ್ತೀಚೆಗೆ ವೈರಲ್​ ಆಗಿದ್ದು ಗೊತ್ತೇ ಇದೆ. ಈ ಬಗ್ಗೆ ಗುರುಕಿರಣ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ಬಿಡುಗಡೆ ಆದ ಹಾಡು ಈಗ ಟ್ರೆಂಡ್​ ಆಗಿದ್ದಕ್ಕೆ ಅವರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆ ಕುರಿತು ಗುರುಕಿರಣ್​ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಅಂದು ಉಪೇಂದ್ರ ಸಿನಿಮಾ ಬಿಡುಗಡೆ ಆದಾಗ ಹಾಡುಗಳು ತೋಪಾಗಿವೆ ಎಂದು ಒಬ್ಬರು ಬರೆದಿದ್ದರು. ಆದರೆ ಎಲ್ಲ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್​ ಆದವು. ‘ಬರಿ ಓಳು..’, ‘ಮಸ್ತ್​ ಮಸ್ತ್​ ಹುಡುಗಿ..’, ‘ಉಪ್ಪಿಗಿಂತ ರುಚಿ ಬೇರೆ ಇಲ್ಲ..’ ಹಾಡುಗಳ ಸದ್ದಿನ ನಡುವೆ ಕರಿಮಣಿ ಹಾಡು ಕಳೆದುಹೋಗಿತ್ತು. ಆದರೆ ಈಗ ಮತ್ತೆ ಕ್ರೇಜ್​ ಬಂದಿದೆ. ಅದನ್ನು ನಮಗೆ ಈಗ ನಂಬೋಕೆ ಆಗಲ್ಲ. ಈಗ ಹೊಸ ಸಾಂಗ್​ ಬಿಡುಗಡೆ ಮಾಡುವಾಗ ಪ್ರಮೋಷನ್​ಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಆದರೆ ಕರಿಮಣಿ ಸಾಂಗ್​ ಯಾವುದೇ ಪ್ರಚಾರ ಇಲ್ಲದೇ ಈಗ ಓಡುತ್ತಿದೆ ಎಂದರೆ ಅದು ಆ ಹಾಡಿಗೆ ಇರುವ ಶಕ್ತಿ’ ಎಂದು ಗುರುಕಿರಣ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More