ನಾಮಪತ್ರ ಸಲ್ಲಿಕೆಯಾದ ಬಳಿಕ ಪ್ರಚಾರಕ್ಕೆ ಬರುತ್ತೇನೆಂದು ರಾಜ್ಯಾಧ್ಯಕ್ಷರಿಗೆ ಹೇಳಿದ್ದೆ: ಬಿ ಶ್ರೀರಾಮುಲು

|

Updated on: Oct 25, 2024 | 7:27 PM

ಲೋಕಸಭಾ ಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಪರಿಶಿಷ್ಟ ಜನಾಂಗದ ಕ್ಷೇತ್ರದಿಂದ ಬಿಜೆಪಿಗೆ ಮತ್ತು ತನಗೆ ಅನ್ಯಾಯವಾಯಿತು ಎಂಬ ಅಂಶವನ್ನು ಮನಗಂಡು ಮತದಾರರು ಪಶ್ಚಾತ್ತಾಪ ಪಡುತ್ತಿದ್ದಾರೆ, ಹಾಗಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿ ಬಂಗಾರು ಹಣಮಂತ ಗೆಲ್ಲೋದು ಶತಸಿದ್ಧ ಅಂತ ಶ್ರೀರಾಮುಲು ಹೇಳಿದರು.

ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರು ಕಣ್ಮರೆಯಾಗಿದ್ದರು. ಆದರೆ ತಾನೆಲ್ಲೂ ಹೋಗಿರಲಿಲ್ಲ, ಸಂಡೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ನಂತರವೇ ಪ್ರಚಾರಕ್ಕಿಳಿಯುವುದಾಗಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಮತ್ತು ಬೇರೆ ಹಿರಿಯ ನಾಯಕರಿಗೂ ಹೇಳಿದ್ದೆ ಎಂದು ಶ್ರೀರಾಮುಲು ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ 21 ಕೋಟಿ ರೂ. ಬಳಕೆಯಾಗಿದೆ ಎಂದು ಈಡಿ ಸಲ್ಲಿಸಿರುವ ಚಾರ್ಜ್ ಶೀಟ್​ನಲ್ಲಿ ಉಲ್ಲೇಖವಾಗಿದೆ, ಪ್ರಚಾರದಲ್ಲಿ ಅದೇ ವಿಷಯವನ್ನು ಅಸ್ತ್ರವಾಗಿ ಬಳಸುವುದಾಗಿ ಮಾಜಿ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಾಲ್ಕು ಬಾರಿ ತುಕಾರಾಂ ಆಯ್ಕೆಯಾಗಿರುವ ಸಂಡೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆ: ಬಿ ನಾಗೇಂದ್ರ

Published On - 4:49 pm, Fri, 25 October 24

Follow us on