ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಸಾಹಿತಿ ಹಂಪಾ ನಾಗರಾಜಯ್ಯ

|

Updated on: Sep 20, 2024 | 4:08 PM

ಈ ಬಾರಿ ಮೈಸೂರು ದಸರಾ ಉದ್ಘಾಟಕ‌ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ಮಾತನಾಡಿ, ‘ನಾನು 50 ದಸರಾ ನೋಡಿದ್ದೇನೆ. ಇವತ್ತು ಕರ್ನಾಟಕ ಮಾತ್ರವಲ್ಲ ದೇಶದಲ್ಲಿ ಹೊಸ ಸಂಚಲನ ಉಂಟಾಗುತ್ತಿದೆ. ನಾನಾ ರೀತಿಯ ತಿಕ್ಕಾಟ, ಘರ್ಷಣೆ, ಸಂಘರ್ಷಗಳಲ್ಲಿ ಇದ್ದೇವೆ. ಇಂತಹ ಸಂಧರ್ಭದಲ್ಲಿ ದಸರಾ ಔಚಿತ್ಯದ ಮಹತ್ವ ಏನು, ಯಾಕಾಗಿ ದಸರಾ ಆಚರಣೆ ಮಾಡಬೇಕು ಎಂಬುದನ್ನು ಚಿಂತನೆ‌ ಮಾಡುವ ಅಗತ್ಯ ಇದೆ. ಇದರ ಬಗ್ಗೆ 3ನೇ ತಾರೀಖಿನಂದು ವಿಸ್ತೃತವಾಗಿ ಮಾತನಾಡುತ್ತೇನೆ ಎಂದರು.

ಮೈಸೂರು, ಸೆ.20: ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ ಎಂದು ದಸರಾ ಉದ್ಘಾಟಕ‌ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ಟಿವಿ9 ಜೊತೆ ಸಂತಸ ಹಂಚಿಕೊಂಡರು. ‘ನಾನು 89 ವಯಸ್ಸಿಗೆ ಪಾದಾರ್ಪಣೆ
ಮಾಡುತ್ತಿದ್ದೇನೆ. ಈ ವಯಸ್ಸಿನಲ್ಲಿ ಸಿಕ್ಕಿರುವುದು ಖುಷಿಯಾಗಿದೆ. ಮೈಸೂರಿಗು ನನಗು ಅವಿನಾಭಾವ ಸಂಬಂಧ ಇದೆ‌. ಮೈಸೂರು ಎಂದರೆ‌‌ ಮನೆಗೆ ಹೋದ ರೀತಿ. ನಾನು ವಿದ್ಯಾಭ್ಯಾಸ ಪಡೆದಿದ್ದು ಕೂಡ ಇಲ್ಲಿಯೇ. 50 ದಸರಾ ನೋಡಿದ್ದೇನೆ. ಇವತ್ತು ಕರ್ನಾಟಕ ಮಾತ್ರವಲ್ಲ ದೇಶದಲ್ಲಿ ಹೊಸ ಸಂಚಲನ ಉಂಟಾಗುತ್ತಿದೆ. ನಾನಾ ರೀತಿಯ ತಿಕ್ಕಾಟ, ಘರ್ಷಣೆ, ಸಂಘರ್ಷಗಳಲ್ಲಿ ಇದ್ದೇವೆ. ಜಗತ್ತಿನಲ್ಲಿ ಯುದ್ದ ನಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ದಸರಾ ಔಚಿತ್ಯ-ಮಹತ್ವ ಏನು, ಯಾಕಾಗಿ ದಸರಾ ಆಚರಣೆ ಮಾಡಬೇಕು ಎಂಬುದನ್ನು ಚಿಂತನೆ‌ ಮಾಡುವ ಅಗತ್ಯ ಇದೆ. ಇದರ ಬಗ್ಗೆ 3ನೇ ತಾರೀಖಿನಂದು ವಿಸ್ತೃತವಾಗಿ ಮಾತನಾಡುತ್ತೇನೆ. ಇದೀಗ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಕನಸು ಮನಸಿನಲ್ಲೂ ಯೋಚನೆ ಮಾಡಿರಲಿಲ್ಲ. ಆದರೆ, ಉದ್ಘಾಟನೆ ಮಾಡುವ ಆಸೆ ಇತ್ತು. ಇದು ನನಗೆ ಬಂದ ಭಾಗ್ಯ‌ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Fri, 20 September 24

Follow us on