ಅಂಜನಾದ್ರಿಯಲ್ಲೂ ಲಾರೆನ್ಸ್ ಬಿಷ್ಣೋಯಿ ಫೊಟೋ ಪ್ರತ್ಯಕ್ಷ! ತಾನು ಗ್ಯಾಂಗ್‌ಸ್ಟರ್ ಅಭಿಮಾನಿ ಎಂದ ಹನುಮ ಭಕ್ತ
ಕೊಪ್ಪಳದ ಅಂಜನಾದ್ರಿಯಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಹನುಮ ಮಾಲೆ ಧರಿಸಿ ಬಂದ ಬೆಳಗಾವಿ ಜಿಲ್ಲೆಯ ಭಕ್ತನೊಬ್ಬ ಲಾರೆನ್ಸ್ ಬಿಷ್ಣೋಯಿ ಫೋಟೊ ಹಿಡಿದುಕೊಂಡು ಬಂದಿದ್ದು, ತಾನು ಆತನ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ. ಸದ್ಯ ಆ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.
ಕೊಪ್ಪಳ, ಡಿಸೆಂಬರ್ 3: ಅಂಜನಾದ್ರಿಯಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಫೋಟೋ ಹಿಡಿದು ಹನುಮ ಭಕ್ತನೊಬ್ಬ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದಾನೆ. ಬೆಳಗಾವಿ ಜಿಲ್ಲೆ ಕಾನಾಪೂರ ತಾಲೂಕಿನ ಕೋಳಿವಾಡ ಗ್ರಾಮದ ರಾಜು ಎನ್ನುವ ಯುವಕ 9 ದಿನಗಳ ಹನುಮ ಮಾಲೆ ಹಾಕಿಕೊಂಡು ಬಿಷ್ಣೋಯಿ ಫೋಟೋ ಹಿಡಿದು ಬಂದಿರುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ರಾಜು ತಾನು ಲಾರೆನ್ಸ್ ಬಿಷ್ಣೋಯಿ ಅಭಿಮಾನಿ ಎಂದು ಹೇಳಿಕೊಂಡಿದ್ದು, ‘‘ಲಾರೆನ್ಸ್ ಬಿಷ್ಣೋಯಿಯಿಂದ ದೇಶ ಉಳಿದಿದೆ ಎಂಬ ಮನೋಭಾವ ನಮ್ಮದು’’ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಹನುಮ ಭಕ್ತನಾಗಿ ಮಾಲೆ ಧರಿಸಿರುವ ಯುವಕ ಗ್ಯಾಂಗ್‌ಸ್ಟರ್‌ನ ಫೋಟೋ ಹಿಡಿದು ಬಂದಿರುವುದು ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗಿದೆ.
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
