Loading video

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ

|

Updated on: Jan 06, 2025 | 4:20 PM

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ಮೊದಲ ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಾರೆ. ಈಗ ಹರಿಪ್ರಿಯಾ ಅವರಿಗೆ 9 ತಿಂಗಳು ತುಂಬಿದ್ದು, ಖಾಸಗಿ ರೆಸಾರ್ಟ್​ನಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ಈ ಸಮಾರಂಭಕ್ಕೆ ಹಿರಿಯ ನಟಿ ತಾರಾ ಅನುರಾಧ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಸಾಕ್ಷಿ ಆಗಿದ್ದಾರೆ. ಹರಿಪ್ರಿಯಾಗೆ ಎಲ್ಲರೂ ಆಶೀರ್ವಾದ ಮಾಡಿದ್ದಾರೆ.

ಖ್ಯಾತ ನಟಿ ಹರಿಪ್ರಿಯಾ ಅವರು ಮೊದಲ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. 2023ರ ಜನವರಿಯಲ್ಲಿ ವಸಿಷ್ಠ ಸಿಂಹ ಜೊತೆ ಮದುವೆ ಆದ ಹರಿಪ್ರಿಯಾ ಅವರು ಈಗ 9 ತಿಂಗಳ ತುಂಬು ಗರ್ಭಿಣಿ. ಖಾಸಗಿ ರೆಸಾರ್ಟ್​ನಲ್ಲಿ ಹರಿಪ್ರಿಯಾ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿದೆ. ಇದರಲ್ಲಿ ಆಪ್ತರು ಭಾಗಿ ಆಗಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ನಟಿ ತಾರಾ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.