AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರೀಶ್​​ ರಾಯ್ ಅಂತಿಮ ದರ್ಶನ ಪಡೆದ ಯಶ್: ಎಲ್ಲೂ ಹೇಳಬೇಡ ಎಂದು ಪುತ್ರನಿಗೆ ಹಣ ಸಹಾಯ

ಹರೀಶ್​​ ರಾಯ್ ಅಂತಿಮ ದರ್ಶನ ಪಡೆದ ಯಶ್: ಎಲ್ಲೂ ಹೇಳಬೇಡ ಎಂದು ಪುತ್ರನಿಗೆ ಹಣ ಸಹಾಯ

ಗಂಗಾಧರ​ ಬ. ಸಾಬೋಜಿ
|

Updated on:Nov 06, 2025 | 7:34 PM

Share

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್​ ಖಳನಟ ಹರೀಶ್ ರಾಯ್ ಅವರು ಗುರುವಾರ ನಿಧನರಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಹರೀಶ್ ಅವರ ಮಕ್ಕಳಿಗೆ ಯಶ್​​ ಧೈರ್ಯ ತುಂಬಿದ್ದಾರೆ. ಕಿರಿಯ ಪುತ್ರನನ್ನು ಕರೆದು ಆರ್ಥಿಕ ನೆರವು ನೀಡಿದ್ದಾರೆ. ವಿಡಿಯೋ ನೋಡಿ.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್​ ಖಳನಟ ಹರೀಶ್ ರಾಯ್ (Harish Roy) ಅವರು ಇಂದು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗ ಹರೀಶ್ ರಾಯ್ ಅವರ ನಿಧನಕ್ಕೆ ಕಂಬನಿ ಮಿಡಿದಿದೆ. ನಟ ರಾಕಿಂಗ್​ ಸ್ಟಾರ್​ ಯಶ್,​ ಹರೀಶ್ ರಾಯ್​​ ಅವರ ಅಂತಿಮ ದರ್ಶನ ಪಡೆದು ಭಾವುಕರಾದರು. ಇನ್ನು ಇದೇ ವೇಳೆ ಯಶ್ ಅವರು ಹರೀಶ್ ರಾಯ್​ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಕಿರಿಯ ಪುತ್ರ ರೋಷನ್​​ನನ್ನು ತಮ್ಮ ಕಾರಿನ ಒಳಗೆ ಕರೆಸಿ, ಮಾತನಾಡಿಸಿದ ಯಶ್, ಹಣ ಸಹಾಯ ಮಾಡಿದ್ದು, ಈ ಬಗ್ಗೆ ಎಲ್ಲೂ ಹೇಳಬೇಡ ಎಂದಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ.

 

Published on: Nov 06, 2025 07:32 PM