ಮೂರು ವರ್ಷದಿಂದ ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದೇವೆ: ವಿಜಯಪುರದ ಮುಸ್ಲಿಂ ವ್ಯಕ್ತಿ ಹೇಳಿದ್ದೇನು ನೋಡಿ
ಹಾಸನಾಂಬೆ ದರ್ಶನೋತ್ಸವದ ಎರಡನೇ ದಿನದಂದು ಭಕ್ತರ ಸಾಗರವೇ ಹರಿದುಬಂದಿದೆ. ಜಿಲ್ಲಾಡಳಿತದ ವಿಶೇಷ ವ್ಯವಸ್ಥೆಗಳ ನಡುವೆ, ದಾವಣಗೆರೆ ಮತ್ತು ವಿಜಯಪುರದಿಂದ ಬಂದ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಧರ್ಮಗಳ ನಡುವೆ ಸೌಹಾರ್ದತೆ ಇರಬೇಕು ಎಂದು ಪ್ರತಿಪಾದಿಸುವ ಮುಸ್ಲಿಂ ಭಕ್ತ ಅನ್ವರ್ ಹುಸೇನ್ ಅವರ ಮಾತುಗಳು ಗಮನ ಸೆಳೆದವು.
ಹಾಸನ, ಅಕ್ಟೋಬರ್ 11: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇಗುಲದ ದರ್ಶನೋತ್ಸವದ ಎರಡನೇ ದಿನ ಭಕ್ತ ಸಾಗರವೇ ಹರಿದುಬಂದಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ್ದಾರೆ. ಜಿಲ್ಲಾಡಳಿತವು ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಈ ಬಾರಿ ವಿಐಪಿ ಮತ್ತು ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಿ, 1000 ರೂ. ಮತ್ತು 300 ರೂ. ಟಿಕೆಟ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. 300 ರೂ. ಟಿಕೆಟ್ ಪಡೆದ ಭಕ್ತರಿಗಾಗಿ ಎರಡು ಕಿಲೋಮೀಟರ್ ಉದ್ದದ ಸರತಿ ಸಾಲು ನಿರ್ಮಿಸಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಒಂದು ವರ್ಷದೊಳಗಿನ ಮಕ್ಕಳಿಗೆ ಉಚಿತ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.
ದಾವಣಗೆರೆ ಮತ್ತು ವಿಜಯಪುರದಿಂದ ಬಂದ ಭಕ್ತರು ಪ್ರತಿ ವರ್ಷ ತಪ್ಪದೆ ದರ್ಶನಕ್ಕೆ ಬರುವುದಾಗಿ ತಿಳಿಸಿದ್ದಾರೆ. ಈ ಭಕ್ತರ ಸಾಲಿನಲ್ಲಿ ವಿಶೇಷವಾಗಿ ವಿಜಯಪುರ ಜಿಲ್ಲೆ ಸಿಂದಗಿಯಿಂದ ಬಂದ ವಕೀಲರ ತಂಡದೊಂದಿಗೆ ಮುಸ್ಲಿಂ ವ್ಯಕ್ತಿ ಅನ್ವರ್ ಹುಸೇನ್ ಅವರಿದ್ದರು. ‘ಟಿವಿ9’ ಜತೆ ಮಾತನಾಡಿದ ಅವರು, ವ್ಯವಸ್ಥೆ ಎಲ್ಲ ಚೆನ್ನಾಗಿ ಮಾಡಿದ್ದಾರೆ. 3 ವರ್ಷಗಳಿಂದ ದೇವಿ ದರ್ಶನಕ್ಕೆ ಬರುತ್ತದ್ದೇವೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ದೇವರಿದ್ದಾನೆ, ನಾವು ಸೌಹಾರ್ದತೆಯಿಂದ ಇರುತ್ತೇವೆ. ಭೂತ, ಭವಿಷ್ಯ, ವರ್ತಮಾನದಲ್ಲೂ ನಾವು ಸೌಹಾರ್ದತೆಯಿಂದ ಇರುತ್ತೇವೆ ಎಂದರು. ಭಕ್ತಿ ಇರುವ ಕಡೆ ದೇವರು ಇರುತ್ತಾನೆ. ಎಲ್ಲ ದೇವರುಗಳು ಒಂದೇ, ಎಲ್ಲ ಶಕ್ತಿ ದೇವತೆಗಳೂ ಒಂದೇ. ಸೃಷ್ಟಿಕರ್ತ ಒಬ್ಬನೇ ಎಂದು ಸೌಹಾರ್ದತೆಯ ಸಂದೇಶವನ್ನು ಸಾರಿದರು.
TV9 Network ನ್ಯೂಸ್ ಡೈರೆಕ್ಟರ್ಗೆ ವಾಯ್ಸ್ ಆಪ್ ದ ಪೀಪಲ್ ಅವಾರ್ಡ್
ಕೆಂಪೇಗೌಡ ಏರ್ಪೋಟ್ನಲ್ಲೇ ಲಾಂಗ್ ಹಿಡಿದು ಅಟ್ಟಾಡಿಸಿದ ವಿಡಿಯೋ ಸೆರೆ
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
