ಬೆಳಗ್ಗೆ ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಸಂಜೆಯೇ ಪ್ರಿಯಕರನ ಜತೆ ವಿವಾಹವಾದ್ಲು!

Updated By: Ganapathi Sharma

Updated on: May 24, 2025 | 9:44 AM

ಪ್ರೀತಿಸಿದವನಿಗಾಗಿ ಕೊನೆ ಗಳಿಗೆಯಲ್ಲಿ ಮದುವೆ ಮುರಿದುಬಿದ್ದ ಪ್ರಕರಣ. ಕಡೆಗೂ ಪ್ರಿಯಕರ ರಘು ಜೊತೆ ವಿವಾಹವಾದ ಪಲ್ಲವಿ. ಗಣಪತಿ ದೇವಾಲಯದಲ್ಲಿ ನಡೆದ ಸರಳ ವಿವಾಹ. ಹಾಸನದ ಆದಿಚುಂಚನಗಿರಿ ಕಲ್ಯಾಣಮಂಟಪದಲ್ಲಿರುವ ದೇವಾಲಯ. ಪ್ರಿಯಕರ ರಘು ಜೊತೆ ವಿವಾಹ ನೆರವೇರಿಸಿದ ಯುವತಿ ಪೋಷಕರು. ಪಲ್ಲವಿ ಹಾಗೂ ರಘು ಪೋಷಕರ ಸಮ್ಮುಖದಲ್ಲಿ ನಡೆದ ವಿವಾಹ.

ಹಾಸನ, ಮೇ 24: ಮದುವೆ ಸಮಾರಂಭ ನಡೆಯುತ್ತಿದ್ದಾಗ ವಧು ತಾಳಿ ಕಟ್ಟಲು ಬಿಡದೆ, ತಾನು ಪ್ರೀತಿಸಿದವನ ಜತೆಯೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದ ವಿದ್ಯಮಾನಕ್ಕೆ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪ ಶುಕ್ರವಾರ ಸಾಕ್ಷಿಯಾಗಿತ್ತು. ಇದೀಗ ಅದೇ ಯುವತಿ ಶುಕ್ರವಾರ ಸಂಜೆಯೇ ತನ್ನ ಪ್ರಿಯಕರನ ಜತೆ ವಿವಾಹವಾಗಿದ್ದಾಳೆ. ಆದಿಚುಂಚನಗಿರಿ ಕಲ್ಯಾಣಮಂಟಪದಲ್ಲಿರುವ ಗಣಪತಿ ದೇವಾಲಯದಲ್ಲಿ ಪಲ್ಲವಿ ಹಾಗೂ ರಘು ಪೋಷಕರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಇದರೊಂದಿಗೆ ಪ್ರೀತಿಸಿದವನಿಗಾಗಿ ಕೊನೆ ಘಳಿಗೆಯಲ್ಲಿ ಮದುವೆ ಮುರಿದುಬಿದ್ದ ಪ್ರಕರಣ ಕೊನೆಗೂ ಸುಖಾಂತ್ಯವಾಗಿದೆ.

ಪೂರ್ತಿ ವಿವರಗಳಿಗೆ ಓದಿ: ಕರಿಮಣಿ ಮಾಲೀಕ ನೀನಲ್ಲ.. ವರನ ಬಿಟ್ಟು ಪ್ರಿಯಕರನೊಂದಿಗೆ ತಾಳಿ ಕಟ್ಟಿಸಿಕೊಂಡ ವಧು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ