ಹಾಸನ: ಸಾಮಾನ್ಯ ಸಭೆ ವೇಳೆ ಶಾಸಕ ಹೆಚ್​ಪಿ ಸ್ವರೂಪ್‌ ಪ್ರಕಾಶ್​​ಗೆ ಕರೆಂಟ್ ಶಾಕ್

| Updated By: ಗಂಗಾಧರ​ ಬ. ಸಾಬೋಜಿ

Updated on: Oct 16, 2023 | 7:33 PM

ರಾಜ್ಯದಲ್ಲಿ ಸದ್ಯ ಲೋಡ್ ಶೆಡ್ಡಿಂಗ್​​ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಲವೆಡೆ ರಾಜಕೀಯ ಪಕ್ಷಗಳ ಸಭೆ ನಡೆಯುವಾಗ ವಿದ್ಯುತ್ ಕೈ ಕೊಟ್ಟ ಉದಾಹರಣೆಗಳಿವೆ. ಆದರೆ ಸದ್ಯ ಹಾಸನ ನಗರಸಭೆ ಸಾಮಾನ್ಯ ಸಭೆ ವೇದಿಕೆ ಮೇಲಿದ್ದ ಟೇಬಲ್ ಮೈಕ್ ಮುಟ್ಟಿದಾಗ ಶಾಸಕ ಹೆಚ್.ಪಿ.ಸ್ವರೂಪ್‌ ಪ್ರಕಾಶ್​ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ.​

ಹಾಸನ, ಅಕ್ಟೋಬರ್​​​ 16: ರಾಜ್ಯದಲ್ಲಿ ಸದ್ಯ ಲೋಡ್ ಶೆಡ್ಡಿಂಗ್​​ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಕೂಡ ಉಂಟಾಗಿತ್ತಿದೆ. ಕೆಲವೆಡೆ ರಾಜಕೀಯ ಪಕ್ಷಗಳ ಸಭೆ ನಡೆಯುವಾಗ ವಿದ್ಯುತ್ ಕೈ ಕೊಟ್ಟ ಉದಾಹರಣೆಗಳಿವೆ. ಆದರೆ ಸದ್ಯ ಶಾಸಕರೊಬ್ಬರಿಗೆ ಕರೆಂಟ್ ಶಾಕ್ (power shock)​ ಹೊಡೆದಿದೆ. ಹೌದು ಹಾಸನ ನಗರಸಭೆ ಸಾಮಾನ್ಯ ಸಭೆ ವೇದಿಕೆ ಮೇಲಿದ್ದ ಟೇಬಲ್ ಮೈಕ್ ಮುಟ್ಟಿದಾಗ ಶಾಸಕ ಹೆಚ್.ಪಿ.ಸ್ವರೂಪ್‌ ಪ್ರಕಾಶ್​ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ.​ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಾಸನ ನಗರಸಭೆ ಕುವೆಂಪು ಸಭಾಂಗಣದಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.