ಹೆಚ್ಡಿ ರೇವಣ್ಣಗೆ ಜಾಮೀನು: ಹೊಳೆನರಸೀಪುರದಲ್ಲಿ ಸಂಭ್ರಮವೋ ಸಂಭ್ರಮ!
ಕಿಡ್ನಾಪ್ ಪ್ರಕರಣದಲ್ಲಿ ಜೈಲು ಸೇರಿದ ಹೆಚ್.ಡಿ.ರೇವಣ್ಣಗೆ ಕೊನೆಗೂ ರಿಲೀಫ್ ಸಿಕ್ಕಿದೆ. ಜನ ಪ್ರತಿನಿಧಿಗಳ ನ್ಯಾಯಾಲಯದಿಂದ ರೇವಣ್ಣಗೆ ಜಾಮೀನು ಸಿಕ್ಕಿದೆ. ಜಾಮೀನು ಸಿಕ್ಕರೂ ಇವತ್ತು ರೇವಣ್ಣ ಇಂದು ಬಿಡುಗಡೆ ಆಗಲ್ಲ. ಬದಲಿಗೆ ನಾಳೆ ರಿಲೀಸ್ ಆಗಲ್ಲಿದ್ದಾರೆ. ಅತ್ತ ಹೆಚ್.ಡಿ.ರೇವಣ್ಣಗೆ ಜಾಮೀನು ಸಿಗುತ್ತಿದ್ದಂತೆ ಇತ್ತ ಹೊಳೆನರಸೀಪುರದ ಮಹಾತ್ಮ ಗಾಂಧಿ ಸರ್ಕಲ್ನಲ್ಲಿ ಅಭಿಮಾನಿಗಳು ರೇವಣ್ಣ ಪರ ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಹಾಸನ, ಮೇ 13: ಕಿಡ್ನಾಪ್ ಪ್ರಕರಣದಲ್ಲಿ ಜೈಲು ಸೇರಿದ ಹೆಚ್.ಡಿ.ರೇವಣ್ಣಗೆ (HD Revanna) ಕೊನೆಗೂ ರಿಲೀಫ್ ಸಿಕ್ಕಿದೆ. ಜನ ಪ್ರತಿನಿಧಿಗಳ ನ್ಯಾಯಾಲಯದಿಂದ ರೇವಣ್ಣಗೆ ಜಾಮೀನು ಸಿಕ್ಕಿದೆ. ಜಾಮೀನು ಸಿಕ್ಕರೂ ಇವತ್ತು ರೇವಣ್ಣ ಇಂದು ಬಿಡುಗಡೆ ಆಗಲ್ಲ. ಬದಲಿಗೆ ನಾಳೆ ರಿಲೀಸ್ ಆಗಲ್ಲಿದ್ದಾರೆ. ಅತ್ತ ಹೆಚ್.ಡಿ.ರೇವಣ್ಣಗೆ ಜಾಮೀನು ಸಿಗುತ್ತಿದ್ದಂತೆ ಇತ್ತ ಹೊಳೆನರಸೀಪುರದ ಮಹಾತ್ಮ ಗಾಂಧಿ ಸರ್ಕಲ್ನಲ್ಲಿ ಅಭಿಮಾನಿಗಳು (Fans) ರೇವಣ್ಣ ಪರ ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಪಟಾಕಿ ಸಿಡಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ನಮ್ಮ ನಾಯಕರು ಮಾಡದ ತಪ್ಪಿಗೆ ಜೈಲಿಗೆ ಕಳಿಸಲಾಗಿತ್ತು. ಈಗ ಅವರಿಗೆ ಜಾಮೀನು ಸಿಕ್ಕಿದೆ. ನಮ್ಮ ನಾಯಕರ ಬಿಡುಗಡೆಯಿಂದ ನಮಗೆ ಖುಷಿ ಆಗಿದೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.