ಗ್ರಾಮದಲ್ಲಿ ದಿಢೀರ್ ಸ್ವಾಮೀಜಿಗಳು ಬಳಸುವ ಪಾದುಕೆ, ದಂಡ ಪತ್ತೆ: ಜನರಲ್ಲಿ ಆತಂಕ
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಬಳಿ ಸ್ವಾಮೀಜಿಗಳು ಬಳಸುವ 12 ಜೊತೆ ಪಾದುಕೆ, 28 ದಂಡಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಸ್ವಾಮೀಜಿಗಳ ತಂಡ ಬಂದು ಬಿಟ್ಟು ಹೋಗಿದ್ದಾರೋ ಅಥವಾ ಏನಾದರೂ ಪೂಜೆಗಾಗಿ ಹೀಗೆ ಮಾಡಲಾಗಿದೆಯೇ ಎಂಬ ಬಗ್ಗೆ ಅನುಮಾನ ಉಂಟಾಗಿದೆ.
ಹಾಸನ, ಅಕ್ಟೋಬರ್ 05: ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಬಳಿ ಸ್ವಾಮೀಜಿಗಳು ( ಬಳಸುವ ಪಾದುಕೆ, ದಂಡ ಪತ್ತೆ ಆಗಿರುವಂತಹ ಘಟನೆ ನಡೆದಿದೆ. 12 ಜೊತೆ ಪಾದುಕೆ, 28 ದಂಡ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ (People) ಆತಂಕ ಸೃಷ್ಟಿಯಾಗಿದೆ. ವಿಶಾಲ ಪ್ರದೇಶದಲ್ಲಿ ಸರತಿ ಸಾಲಿನಲ್ಲಿ ಪಾದುಕೆ, ದಂಡ ಜೋಡಿಸಲಾಗಿದೆ. ಸ್ವಾಮೀಜಿಗಳ ತಂಡ ಬಂದು ಬಿಟ್ಟು ಹೋಗಿದ್ದಾರೋ ಅಥವಾ ಏನಾದರೂ ಪೂಜೆಗಾಗಿ ಹೀಗೆ ಮಾಡಲಾಗಿದೆಯೇ ಎಂಬ ಬಗ್ಗೆ ಅನುಮಾನ ಉಂಟಾಗಿದೆ. ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 05, 2023 06:04 PM
Latest Videos