ನಾನು ಹೊರಗೆ ಬಂದ ದಿನ ಸರ್ಕಾರ ಪತನವಾಗುತ್ತೆ: ವಕೀಲ ದೇವರಾಜೇಗೌಡ
ನಾನು ಹೊರಗೆ ಬಂದ ದಿನ ಸರ್ಕಾರ ಪತನವಾಗುತ್ತೆ ಎಂದು ಎಸ್ಐಟಿ ವಶದಲ್ಲಿರುವ ಬಿಜೆಪಿ ಮುಖಂಡು, ವಕೀಲ ದೇವರಾಜೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇನ್ನು ನನ್ನ ಬಂಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇರ ಹೊಣೆ ಎಂದು ಕೂಡ ಹೇಳಿದ್ದಾರೆ. ಕಾರ್ತಿಕ್ ಪತ್ನಿ ಅಪಹರಿಸಿರುವ ವಿಡಿಯೋ ನನ್ನ ಬಳಿ ಇದೆ. ಡಿಕೆ ಶಿವಕುಮಾರ್ ನನ್ನ ಜೊತೆ ಮಾತಾಡಿರುವ ಆಡಿಯೋ ಕೂಡ ಇದೆ. ಸದ್ಯದಲ್ಲೇ ಈ ವಿಡಿಯೋ, ಆಡಿಯೋ ಬಿಡುಗಡೆ ಮಾಡುವೆ ಎಂದಿದ್ದಾರೆ.
ಹಾಸನ, ಮೇ 17: ಹಾಸನ ಸಂಸದ ಪ್ರಜ್ವಲ್ (Prajwal Revanna) ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡಗೆ (Devaraje Gowda)
ಸಂಕಷ್ಟ ಎದುರಾಗಿದ್ದು, ನಾಳೆ ಸಂಜೆ 5 ಗಂಟೆವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಹಾಸನದ 5ನೇ ಹೆಚ್ಚುವರಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ. ಎಸ್ಐಟಿ ವಶದಲ್ಲಿರುವ ದೇವರಾಜೇಗೌಡ ಪೊಲೀಸ್ ವಾಹನದಲ್ಲಿ ಕುಳಿತು ನಾನು ಹೊರಗೆ ಬಂದ ದಿನ ಸರ್ಕಾರ ಪತನವಾಗುತ್ತೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇನ್ನು ನನ್ನ ಬಂಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇರ ಹೊಣೆ ಎಂದು ಕೂಡ ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.