ಹಾಸನದಲ್ಲಿ ತಪ್ಪಿದ ಮತ್ತೊಂದು ದುರಂತ: ಕುಡಿದ ಮತ್ತಿನಲ್ಲಿ ಯದ್ವಾತದ್ವ ಗೂಡ್ಸ್ ವಾಹನ ಚಾಲನೆ, ಬೈಕ್ಗಳಿಗೆ ಡಿಕ್ಕಿ
ಹಾಸನದಲ್ಲಿ 10 ಜನರ ಸಾವಿನ ದುರಂತ ಮಾಸುವ ಮುನ್ನವೇ ಗೂಡ್ಸ್ ವಾಹನ ಚಾಲಕನೊಬ್ಬ ಕೆಆರ್ ಪುರಂ ನಲ್ಲಿ ಮೂರ್ನಾಲ್ಕು ವಾಹನಗಳಿಗೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ. ಸ್ಥಳೀಯ ಯುವಕರು ಆತನ್ನು ಹಿಡಿದು, ಧರ್ಮದೇಟು ಕೊಟ್ಟಿದ್ದಾರೆ. ಮದ್ಯಪಾನ ಅಮಲಿನಲ್ಲಿ ಬೈಕ್ ಸವಾರರಿಗೆ ಗುದ್ದಿದ ಚಾಲಕನ ದುರ್ವರ್ತನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಾಸನ, ಸೆಪ್ಟೆಂಬರ್ 16: ಹಾಸನದ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸಂಭವಿಸಿದ್ದ ಭೀಕರ ಟ್ರಕ್ ಅಪಘಾತ ಹತ್ತು ಜನರನ್ನು ಬಲಿ ಪಡೆದ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ನಗರದ ಕೆಆರ್ ಪುರಂನಲ್ಲಿ ಗೂಡ್ಸ್ ವಾಹನ ಚಾಲಕನೋರ್ವ, ಮದ್ಯಪಾನದ ಅಮಲಿನಲ್ಲಿ ವಾಹನ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿಹೊಡೆಸಿ, ಬೈಕ್ ಸವಾರರು ಕೆಳಗೆ ಬಿದ್ದರೂ ಲೆಕ್ಕಿಸದೇ ಪರಾರಿಯಾಗಲು ಯತ್ನಿಸಿದ್ದಾನೆ. ಅಶೋಕ ಲೇಲ್ಯಾಂಡ್ ಗೂಡ್ಸ್ ಚಾಲಕನನ್ನು ಯುವಕರು ಬೆನ್ನಟ್ಟಿ ಹಿಡಿದಿದ್ದು, ಸ್ಥಳೀಯರು ಧರ್ಮದೇಟು ಹಾಕಿದ್ದಾರೆ. ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮರಾದ ದೃಶ್ಯ ಈಗ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 16, 2025 11:58 AM