ಆರತಿ ತಟ್ಟೆಗೆ ಹಾಕಲು ಸಿದ್ದರಾಮಯ್ಯಗೆ ದುಡ್ಡು ಕೊಟ್ಟ ಡಿಕೆ ಶಿವಕುಮಾರ್!

| Updated By: Ganapathi Sharma

Updated on: Sep 06, 2024 | 2:44 PM

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಲೋಕಾರ್ಪಣೆಗೂ ಮುನ್ನ ಪೂಜೆ, ಹೋಮ-ಹವನ ನೆರವೇರಿಸಲಾಯಿತು. ಇದೇ ವೇಳೆ, ಆರತಿ ತಟ್ಟೆಗೆ ಹಾಕಲು ಸಿಎಂ ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಪರ್ಸ್​​ನಿಂದ ದುಡ್ಡು ತೆಗೆದು ಕೊಡುತ್ತಿರುವುದು ಕಂಡುಬಂತು. ಸಿಎಂಗೆ ಡಿಕೆಶಿ ದುಡ್ಡು ಕೊಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

ಹಾಸನ, ಸೆಪ್ಟೆಂಬರ್​ 6: ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾದರು. ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪೂಜೆ, ಹೋಮ-ಹವನ ನೆರವೇರಿತು.

ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಪೂಜೆ ನೆರವೇರಿತು. ಡಿಸಿಎಂ ಡಿಕೆ ಶಿವಕುಮಾರ್ ಬೆಳಗ್ಗೆಯೇ ಸ್ಥಳದಲ್ಲಿ ಹಾಜರಿದ್ದು, ಪೂಜೆ, ಹೋಮ-ಹವನದಲ್ಲಿ ಪಾಲ್ಗೊಂಡರು. ನಂತರ ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ