AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕಿನಲ್ಲಿ ಸಂತೋಷ ಕಂಡುಕೊಳ್ಳಬೇಕಾದರೆ, ಜನರಿಂದ ನಿರೀಕ್ಷೆಯಿಟ್ಟುಕೊಳ್ಳದೆ ಸಹಾಯ ಮಾಡಿ ಅಂತಾರೆ ಡಾ ಸೌಜನ್ಯ ವಶಿಷ್ಠ

ಬದುಕಿನಲ್ಲಿ ಸಂತೋಷ ಕಂಡುಕೊಳ್ಳಬೇಕಾದರೆ, ಜನರಿಂದ ನಿರೀಕ್ಷೆಯಿಟ್ಟುಕೊಳ್ಳದೆ ಸಹಾಯ ಮಾಡಿ ಅಂತಾರೆ ಡಾ ಸೌಜನ್ಯ ವಶಿಷ್ಠ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2021 | 8:55 PM

ಸಾಮಾನ್ಯವಾಗಿ ನಾವೆಲ್ಲ ಕರುಬವ ಅಂಶವೆಂದರೆ ನಾವೇನೇ ಮಾಡಿದರೂ ಜನ ಸಂತೋಷ ಪಡುವುದಿಲ್ಲ ಅನ್ನೋದು. ಹಾಗೆ ಎಲ್ಲರಿಗೂ ಅನಿಸುತ್ತದೆ. ನಾವು ಪೂಜಿಸುವ, ಆರಾಧಿಸುವ ಶ್ರೀಕೃಷ್ಣ, ರಾಮ ಹಾಗೂ ಯೇಸು ಕ್ರಿಸ್ತನಿಗೂ ಎಲ್ಲರನ್ನು ಮೆಚ್ಚಿಸಲು, ಒಪ್ಪಿಸಲು, ಸಂತೋಷವಾಗಿಡಲು ಸಾಧ್ಯವಾಗಲಿಲ್ಲ ಎಂದು ಸೌಜನ್ಯ ಹೇಳುತ್ತಾರೆ.

ಇಂಗ್ಲಿಷ್​​ನಲ್ಲಿ ಒಂದು ಗಾದೆ ಮಾತಿದೆ, you can’t make everyone happy ಅಂತ. ಇದು ನಾವು ಬದುಕಿನಲ್ಲಿ ಪ್ರತಿದಿನ ಕಂಡುಕೊಳ್ಳುವ ಅಂಶವೆಂದರೆ ಅತಿಶಯೋಕ್ತಿ ಅನಿಸದು. ನೀವು ವಿವಾಹಿತರಾಗಿದ್ದು ತಂದೆ-ತಾಯಿಗಳು ನಿಮ್ಮ ಜೊತೆ ವಾಸವಾಗಿದ್ದರೆ, ಯಾರ ಪರ ಮಾತಾಡಿದರೂ ತಪ್ಪೇ. ಅಮ್ಮನ ಪರ ಮಾತಾಡಿದರೆ ಹೆಂಡತಿಗೆ ಸಿಟ್ಟು ಅಕೆಯ ಪರ ಮಾತಾಡಿದರೆ ಅಮ್ಮನಿಗೆ ಮುನಿಸು. ನಮ್ಮ ವರ್ಕ್ ಪ್ಲೇಸ್ಗಳಲ್ಲೂ ಈ ಆಯಾಮನ್ನು ನಾವು ಕಂಡುಕೊಳ್ಳುತ್ತಿರುತ್ತೇವೆ. ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ಸೋಮವಾರದಂದು ಸದರಿ ವಿಷಯದ ಬಗ್ಗೆ ಮಾತಾಡಿದ್ದಾರೆ. ಬಹಳ ಸರಳ ಮತ್ತು ಸುಲಭ ಉಪಾಯಗಳನ್ನು ನಾವು ಪ್ರತಿನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ, ನಾವು ಸಂತೋಷವಾಗಿರುವ ಜೊತೆ ಬೇರೆಯವರನ್ನು ಸಂತೋಷವಾಗಿಡಬಹುದು ಅಂತ ಡಾ ಸೌಜನ್ಯ ಹೇಳುತ್ತಾರೆ.

ಸಾಮಾನ್ಯವಾಗಿ ನಾವೆಲ್ಲ ಕರುಬವ ಅಂಶವೆಂದರೆ ನಾವೇನೇ ಮಾಡಿದರೂ ಜನ ಸಂತೋಷ ಪಡುವುದಿಲ್ಲ ಅನ್ನೋದು. ಹಾಗೆ ಎಲ್ಲರಿಗೂ ಅನಿಸುತ್ತದೆ. ನಾವು ಪೂಜಿಸುವ, ಆರಾಧಿಸುವ ಶ್ರೀಕೃಷ್ಣ, ರಾಮ ಹಾಗೂ ಯೇಸು ಕ್ರಿಸ್ತನಿಗೂ ಎಲ್ಲರನ್ನು ಮೆಚ್ಚಿಸಲು, ಒಪ್ಪಿಸಲು, ಸಂತೋಷವಾಗಿಡಲು ಸಾಧ್ಯವಾಗಲಿಲ್ಲ ಎಂದು ಸೌಜನ್ಯ ಹೇಳುತ್ತಾರೆ.

ಹಾಗಾದರೆ ಎಲ್ಲರನ್ನು ಖುಷಿಯಾಗಿಡುವ ಮಂತ್ರ ಯಾವುದು?

ಜನರು; ಅದು ನಮ್ಮ ಕುಟುಂಬದ ಸದಸ್ಯರು, ಆಪ್ತರು, ಸ್ನೇಹಿತರು, ಆಗಿರಬಹುದು ಅಥವಾ ಬೇರೆ ಯಾರಾದಾಗಿರಬಹುದು; ಅವರಿಂದ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಸಹಾಯವನ್ನು ಮಾಡುತ್ತಿದ್ದರೆ, ಸಂತೋಷವಾಗಿರುವುದು ಸಾಧ್ಯ ಅಂತ ಅವರು ಹೇಳುತ್ತಾರೆ. ನಿರೀಕ್ಷೆ ಇಟ್ಟುಕೊಂಡಾಗ ಅದು ಸಾಕಾರಗೊಂಡರೆ ಓಕೆ, ಆದರೆ ಅದು ಹುಸಿ ಹೋದಾಗ ಮಾನಸಿಕ ಯಾತನೆ ಪಡಬೇಕಾಗುತ್ತದೆ. ಹಾಗಾಗಿ ಅದನ್ನು ಇಟ್ಟುಕೊಳ್ಳದಿರುವುದೇ ಉತ್ತಮ ಆಯ್ಕೆ ಎಂದು ಸೌಜನ್ಯ ಹೇಳುತ್ತಾರೆ.

ಬದುಕಿನಲ್ಲಿ ನಮಗೆ ಎರಡು ಆಪ್ಶನ್ ಗಳಿವೆ ಎಂದು ಅವರು ಹೇಳುತ್ತಾರೆ. ಒಂದು ಸಂತೋಷವಾಗಿರುವುದು ಎರಡನೇಯದದು ಸದಾ ಮ್ಲಾನವದನದವರಾಗಿರುವುದು ಅಂದರೆ ವಿನಾಕಾರಣ ಚಿಂತಿಸುತ್ತಾ ದುಖಃದಿಂದ ಜೀವನ ನಡೆಸುವುದು. ಹಿಂದೆ ಅಗಿರವುದಕ್ಕೆ ಚಿಂತಿಸಿ ಸಂತೋಷವನ್ನು ದೂರ ಮಾಡಿಕೊಳ್ಳವುದರಲ್ಲಿ ಯಾವುದೇ ಅರ್ಥವಿಲ್ಲ ಅಂತ ಡಾ ಸೌಜನ್ಯ ಹೇಳುತ್ತಾರೆ. ಹಾಗಾಗಿ ನಿಮ್ಮ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಳ್ಳಲು ಸೌಜನ್ಯ ಹೇಳುವ ಉಪಾಯಗಳನ್ನು ಅಳವಡಿಸಿಕೊಳ್ಳಿ.

ಇದನ್ನೂ ಓದಿ: ತ್ರಿಷಾ ನಂತರ ಮತ್ತೋರ್ವ ಹೀರೋಯಿನ್ ಖಾಸಗಿ ವಿಡಿಯೋ ಲೀಕ್​​; ನರಕದಲ್ಲಿ ನಿಮಗೆ ವಿಶೇಷ ವ್ಯವಸ್ಥೆ ಇದೆ ಎಂದ ​ನಟಿ