ಗುಬ್ಬಿ ಶ್ರೀನಿವಾಸ್ ಜೊತೆ ವೈರತ್ವವೇನೂ ಇಲ್ಲ, ಅವರೊಂದಿಗೆ ಮಾತಾಡುತ್ತೇನೆ: ಜಿ ಪರಮೇಶ್ವರ್

Updated on: Feb 04, 2025 | 11:32 AM

ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಗಬೇಕು ಎಂದು ಪುನಃ ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ನೀಡಲಿಲ್ಲ. ಪಕ್ಷದ ಸೀನಿಯರ್ ಲೀಡರ್​ಗಳಾಗಿರುವವರು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಾಯಿಮುಚ್ಚಿಕೊಂಡು ಕೊಟ್ಟ ಕೆಲಸ ಮಾಡುವಂತೆ ಹೇಳಿರುವುದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ, ಅವರಲ್ಲಿ ಪರಮೇಶ್ವರ್ ಕೂಡ ಒಬ್ಬರು.

ಬೆಂಗಳೂರು: ನಗರರಲ್ಲಿಂದು ಮಾಧ್ಯಮಗಳ ಜೊತೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ಗುಬ್ಬಿಯ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಜೊತೆ ತಮಗೆ ಯಾವುದೇ ವೈಷಮ್ಯವಿಲ್ಲ, ರಾಜಕಾರಣವೆಂದ ಮೇಲೆ ಅಸಮಾಧಾನಗಳು ಇದ್ದೇ ಇರುತ್ತವೆ ಎಂದು ಹೇಳಿದರು. ತಮ್ಮ ಮತ್ತು ಕೆಎನ್ ರಾಜಣ್ಣ ವಿರುದ್ಧ ಅವರಿಗೆ ದ್ವೇಷವೇನೂ ಇಲ್ಲ, ಕಳೆದ ಅಸೆಂಬ್ಲಿ ಚುನಾವಣೆಯಿಂದ ಕೊಂಚ ಅಸಮಾಧಾನಗೊಂಡಿದ್ದಾರೆ, ನಾವೆಲ್ಲ ಒಂದೇ ಪಕ್ಷದಲ್ಲಿದ್ದೇವೆ ಮಾತು ಬಿಡುವಂಥ ಪ್ರಮೇಯವೇನೂ ಇಲ್ಲ, ಅವರೊಂದಿಗೆ ಮಾತಾಡಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಾಗಿ ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜೆಡಿಎಸ್ ಮತ್ತು ಬಿಜೆಪಿ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳೋದು ಕೆಪಿಸಿಸಿ ಅಧ್ಯಕ್ಷರ ನಿರ್ಧಾರಕ್ಕೆ ಬಿಟ್ಟಿದ್ದು: ಜಿ ಪರಮೇಶ್ವರ್