ನಿಗಮ-ಮಂಡಳಿಗಳಿಗೆ ಸದಸ್ಯರ ನೇಮಕಾತಿಗಾಗಿ ಕಾರ್ಯಕರ್ತರ ಪಟ್ಟಿಯನ್ನು ಸುರ್ಜೇವಾಲಾಗೆ ಸಲ್ಲಿಸಿರುವೆ: ಪರಮೇಶ್ವರ್

Updated on: Jul 16, 2025 | 6:01 PM

ನಿಗಮ ಮತ್ತು ಮಂಡಳಿಗಳಿಗೆ ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ಆದಷ್ಟು ಬೇಗ ಆರಂಭಗೊಳ್ಳಲಿದೆ, ಶಾಸಕರು ಅನುದಾನಗಳ ಬಗ್ಗೆ ಸುರ್ಜೇವಾಲಾ ಅವರಿಗೆ ದೂರು ಸಲ್ಲಿಸಿರುವುದು ತನಗೆ ಗೊತ್ತಿಲ್ಲ, ತಮ್ಮ ಇಲಾಖೆ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡುವುದರಿಂದ ಅಂಥ ವಿಷಯಗಳನ್ನು ಶಾಸಕರು ತಮ್ಮೊಂದಿಗೆ ಚರ್ಚಿಸಲ್ಲ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು, ಜುಲೈ 16: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC president DK Shivakumar) ಅವರು ನಿಗಮ ಮತ್ತು ಮಂಡಳಿಗಳಿಗೆ ಸದಸ್ಯರನ್ನು ನೇಮಕ ಮಾಡಲು ಕಾರ್ಯಕರ್ತರ ಒಂದು ಪಟ್ಟಿ ತಯಾರಿಸಲು ಹೇಳಿದ್ದರು, ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ರಂದೀಪ್ ಸುರ್ಜೇವಾಲಾ ಅವರಿಗೆ ಸಲ್ಲಿಸಿದ್ದೇನೆ. ಸಮಿತಿಗೆ ಅಧ್ಯಕ್ಷನೂ ಆಗಿರುವುದರಿಂದ ಸುರ್ಜೇವಾಲಾ, ಸಿಎಂ ಮತ್ತು ಡಿಸಿಎಂ ತನ್ನನ್ನು ಮಾತಾಡಲು ಕರೆದಿದ್ದರು, ಕಾರ್ಯಕರ್ತರ ಬಗ್ಗೆ ತನಗಿರುವ ಮಾಹಿತಿಯನ್ನು ಅವರಿಗೆ ತಿಳಿಸಿದ್ದೇನೆ ಎಂದು ಪರಮೇಶ್ವರ್ ಹೇಳಿದರು.

ಇದನ್ನೂ ಓದಿ:  ದೆಹಲಿಯಂತೆ ಭೋಗ ನಂದೀಶ್ವರ ದೇವಸ್ಥಾನದಲ್ಲೂ ಸಿದ್ದರಾಮಯ್ಯ 5-ವರ್ಷ ತಾವೇ ಸಿಎಂ ಎಂದಿದ್ದಾರೆ: ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ