ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸುಣ್ಣಕಲ್ಲಬಿದರಿ ಗ್ರಾಮದ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಸತಿ ನಿಲಯವು ದನದ ಕೊಟ್ಟಿಗೆಯಲ್ಲಿದೆ. ವಸತಿ ನಿಲಯವಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಮೂಲಭೂತ ಸೌಕರ್ಯಗಳ ಕೊರತೆ, ಕೊಳಕು ಕೊಠಡಿಗಳು, ಸಾಕಷ್ಟು ಶೌಚಾಲಯಗಳ ಕೊರತೆ ಇದೆ. ಹಲವು ವಿದ್ಯಾರ್ಥಿಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ನಿಲಯದ ಆಡಳಿತದ ನಿರ್ಲಕ್ಷ್ಯ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಹಾವೇರಿ, ಫೆಬ್ರವರಿ 16: ರಾಣೆಬೆನ್ನೂರು (Ranebennur) ತಾಲೂಕಿನ ಸುಣ್ಣಕಲ್ಲಬಿದರಿ ಗ್ರಾಮದಲ್ಲಿನ ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯವಿದೆ. ಹಿಂದುಳಿದ ವರ್ಗದ ಮೆಟ್ರಿಕ್ ನಂತರ ಹಾಸ್ಟೆಲ್ನಲ್ಲಿ 125 ವಿದ್ಯಾರ್ಥಿಗಳಿದ್ದಾರೆ. ಈ ಕೊಠಡಿಗೆ ಒಂದೇ ಒಂದು ಕಿಡಕಿಯು ಕೂಡಾ ಸರಿ ಇಲ್ಲ. ಎರಡು ಕೊಠಡಿ, ಮೂರು ಶೌಚಾಲಯಗಳಿವೆ. ವಿದ್ಯಾರ್ಥಿಗಳು ಮೂಲ ಸೌಕರ್ಯ ಇಲ್ಲದೆ ಪರದಾಡುತ್ತಿದ್ದಾರೆ. ಸೌಕರ್ಯ ಇಲ್ಲದೆ ಬೇಸತ್ತ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದರೆ ಟೆಂಡರ್ ಪಡದವರನ್ನು ಕೇಳಿ ಎಂದು ನಿಲಯ ಪಾಲಕರು ಉಡಾಫೆ ಉತ್ತರ ನೀಡಿದ್ದಾರೆ. ಸರಿಯಾದ ಕೋಣೆ ವ್ಯವಸ್ಥೆ ಇಲ್ಲದೆ, 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಡಿಗೆ ರೂಂ ಮಾಡಿಕೊಂಡು ಓದುತ್ತಿದ್ದಾರೆ.
ವರದಿ: ಅಣ್ಣಪ ಬಾರ್ಕಿ
Latest Videos