Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು
ಮದುವೆ ಎಂಬುದು ಪ್ರತಿಯೊಬ್ಬರಿಗೂ ಮರೆಯಲಾಗದ ದಿನ, ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಜೀವನ ಪೂರ್ತಿ ಜತೆಗಿರುತ್ತೇವೆ ಎಂದು ಪ್ರಮಾಣ ಮಾಡುವ ದಿನ. ವರನೊಬ್ಬ ಮದುವೆ ಮನೆಗೆ ಕುದುರೆಯ ಮೇಲೆ ಬಂದಿದ್ದ, ಕೆಳಗಿಳಿಯುವ ಮುನ್ನ ಯಾರೊಂದಿಗೋ ಮಾತನಾಡುತ್ತಲೇ ಪ್ರಾಣ ಬಿಟ್ಟಿರುವ ಘಟನೆ ಮಧ್ಯಪ್ರದೇಶದ ಶಿಯೋಪುರ್ನಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಮದುವೆ ಎಂಬುದು ಪ್ರತಿಯೊಬ್ಬರಿಗೂ ಮರೆಯಲಾಗದ ದಿನ, ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಜೀವನ ಪೂರ್ತಿ ಜತೆಗಿರುತ್ತೇವೆ ಎಂದು ಪ್ರಮಾಣ ಮಾಡುವ ದಿನ. ಆದರೆ ಮದುವೆ ದಿನವೇ ಇಬ್ಬರ ಕನಸು ಮುರಿದುಬಿದ್ದಿದೆ. ವರ ಮದುವೆ ಮನೆಗೆ ಕುದುರೆಯ ಮೇಲೆ ಬಂದಿದ್ದ, ಕೆಳಗಿಳಿಯುವ ಮುನ್ನ ಯಾರೊಂದಿಗೋ ಮಾತನಾಡುತ್ತಲೇ ಪ್ರಾಣ ಬಿಟ್ಟಿರುವ ಘಟನೆ ಮಧ್ಯಪ್ರದೇಶದ ಶಿಯೋಪುರ್ನಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.
ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರದೀಪ್ ಜಾಟ್ ಕಾಂಗ್ರೆಸ್ಸಿನ ವಿದ್ಯಾರ್ಥಿ ವಿಭಾಗವಾದ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ನ ಮಾಜಿ ಜಿಲ್ಲಾ ಅಧ್ಯಕ್ಷರಾಗಿದ್ದರು. ಕುದುರೆಯ ಮೇಲೆ ಸ್ಥಳಕ್ಕೆ ಪ್ರವೇಶಿಸುತ್ತಿರುವ ದೃಶ್ಯಗಳು ಅವರ ಜೊತೆ ಅನೇಕ ಜನರು ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಕುದುರೆ ಮೇಲಿದ್ದಂತೆ ನಿಧಾನವಾಗಿ ನಿಯಂತ್ರಣ ಕಳೆದುಕೊಂಡು ಕುಸಿದು ಬೀಳುತ್ತಾನೆ, ತಕ್ಷಣವೇ ಅಲ್ಲಿರುವವರು ಆತನಿಗೆ ಸಹಾಯ ಮಾಡುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ