ಶಾಲಾ ಬಸ್ ಚಾಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ: ಮುಂದೇನಾಯ್ತು?

Updated on: Jul 17, 2025 | 11:20 AM

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಲಗೊಂಡ ಬಳಿ 25 ವರ್ಷದ ಶಾಲಾ ಬಸ್ ಚಾಲಕ ಪಕ್ಕಿರೇಶ್ ಮಲ್ಲೇಶಣ್ಣನವರ್ ಅವರಿಗೆ ನಿನ್ನೆ ಸಂಜೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಶಾಲಾ ಮಕ್ಕಳನ್ನು ಮನೆಗೆ ಬಿಡುವಾಗ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಹಾವೇರಿ, ಜುಲೈ 17: ಶಾಲಾ ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ (Heart Attack) ಸಂಭವಿಸಿರುವಂತಹ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಕಳಲಗೊಂಡ ಬಳಿ ನಡೆದಿದೆ. ಪಕ್ಕಿರೇಶ್(25) ಹೃದಯಾಘಾತದಿಂದ ಮೃತಪಟ್ಟ ಬಸ್ ಚಾಲಕ. ಶಾಲಾ ಬಸ್​ನಲ್ಲಿದ್ದ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 17, 2025 11:19 AM