AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಲಕ್ಕಿ ಮಾಲೆಗೆ ದೇಶ ವಿದೇಶಗಳಿಂದಲೂ ಡಿಮ್ಯಾಂಡ್: ಏಲಕ್ಕಿ ನಗರಿ ಎಂದು ಹಾವೇರಿಗೆ ಕರೆಯೋದ್ಯಾಕೆ?

ಏಲಕ್ಕಿ ಮಾಲೆಗೆ ದೇಶ ವಿದೇಶಗಳಿಂದಲೂ ಡಿಮ್ಯಾಂಡ್: ಏಲಕ್ಕಿ ನಗರಿ ಎಂದು ಹಾವೇರಿಗೆ ಕರೆಯೋದ್ಯಾಕೆ?

ಗಂಗಾಧರ​ ಬ. ಸಾಬೋಜಿ
|

Updated on: Sep 03, 2026 | 10:27 PM

Share

ಹಾವೇರಿಯ ಏಲಕ್ಕಿ ಕಂಪಿನ ನಗರಿಯೆಂಬ ಹೆಸರು ಅದರ ಸುಪ್ರಸಿದ್ಧ ಏಲಕ್ಕಿ ಮಾಲೆಗಳಿಂದ ಬಂದಿದೆ. ಪಟೇಗಾರ್ ಕುಟುಂಬದ ಶತಮಾನಗಳ ಪರಂಪರೆಯ ಈ ಮಾಲೆಗಳು, ತಮ್ಮ ನೈಸರ್ಗಿಕ ಸುವಾಸನೆ ಮತ್ತು ಬಾಳಿಕೆಗೆ ಹೆಸರಾಗಿವೆ. ಗಣೇಶ ಚತುರ್ಥಿಯಂದು ದೇಶಾದ್ಯಂತ ಅಪಾರ ಬೇಡಿಕೆ ಇರುವ ಇವು, ಹಿಂದೂ-ಮುಸ್ಲಿಂ ಸೌಹಾರ್ದದ ಪ್ರತೀಕವೂ ಹೌದು.

ಹಾವೇರಿ, ಸೆಪ್ಟೆಂಬರ್​ 03: ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಹಾವೇರಿ ಜಿಲ್ಲೆಯು ಏಲಕ್ಕಿ ಕಂಪಿನ ನಗರಿ ಎಂಬ ಖ್ಯಾತಿ ಪಡೆದಿದೆ. ಶತಮಾನಗಳ ಹಿಂದೆ ಈ ಪ್ರದೇಶದ ಬೀದಿಗಳಲ್ಲಿ ಏಲಕ್ಕಿಯನ್ನು ಒಣಗಿಸುತ್ತಿದ್ದುದರಿಂದ, ಸುತ್ತಮುತ್ತಲ ವಾತಾವರಣವು ಸುವಾಸನೆಯಿಂದ ತುಂಬಿರುತ್ತಿತ್ತು. ಈ ವಿಶಿಷ್ಟ ಪರಂಪರೆಯು ಕಾಲಾನಂತರದಲ್ಲಿ ಏಲಕ್ಕಿ ಮಾಲೆಗಳ ತಯಾರಿಕೆಗೆ ನಾಂದಿ ಹಾಡಿತು. ಪಟೇಗಾರ್ ಕುಟುಂಬವು ಈ ಕಲೆಯ ಮೂಲವಾಗಿದೆ. ಬಂಗಾರದ ಕೆಲಸದಿಂದ ಏಲಕ್ಕಿ ಮಾಲೆ ತಯಾರಿಕೆಗೆ ತಿರುಗಿದ ಮೈದುಂಬಿ ಪಟೇಗಾರ್ ಅವರು ಈ ವೃತ್ತಿಗೆ ಅಡಿಪಾಯ ಹಾಕಿದರು. ಅವರ ಮಗ ಉಸ್ಮಾನ್ ಸಾಬ್ ಪಟೇಗಾರ್ ಮತ್ತು ಅವರ ಕುಟುಂಬದವರು ಇಂದು ಈ ಕಲಾ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಾವೇರಿಯ ಏಲಕ್ಕಿ ಮಾಲೆಗಳು ತಮ್ಮ ನೈಸರ್ಗಿಕ ಸುವಾಸನೆ, ಬಾಳಿಕೆ ಮತ್ತು ಯಾವುದೇ ರಾಸಾಯನಿಕಗಳಿಲ್ಲದೆ ತಯಾರಾಗುವುದರಿಂದ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿವೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Follow Us
ಗಂಗಾಧರ​ ಬ. ಸಾಬೋಜಿ
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More