ದೇಶದಲ್ಲಿ ಪ್ರಾಮಾಣಿಕ ರಾಜಕಾರಣಿಗಳ ಕುಟುಂಬ ಇದ್ದರೆ ಅದು ದೇವೇಗೌಡರದ್ದು ಮಾತ್ರ: ಎನ್ ಚಲುವರಾಯಸ್ವಾಮಿ
ದೇವೇಗೌಡರ ಜೊತೆ ತಾನಿದ್ದಾಗ ಅವರು ತಮ್ಮ ಮಕ್ಕಳ ಬಗ್ಗೆ ಏನು ಹೇಳುತ್ತಿದ್ದರು, ನೀಡುತ್ತಿದ್ದ ಬುದ್ಧಿವಾದ ಹೇಗಿರುತಿತ್ತ್ತು ಅನ್ನೋದೆಲ್ಲ ಗೊತ್ತಿದೆ, ಅವರು ಕಾಂಗ್ರೆಸ್ ನಾಯಕರನ್ನು ಟೀಕಿಸುವ ಬದಲು ಅವರ ಮನೆಯಲ್ಲಿ ಸಂಸದರು, ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು-ಎಲ್ಲ ಇದ್ದಾರೆ, ಅವರ ಬಗ್ಗೆ ಒಂದಿಷ್ಟು ಮಾತಾಡಲಿ, ಮೊದಲು ಬಿಜೆಪಿಯನ್ನು ಟೀಕಿಸುತ್ತಿದ್ದರು, ಈಗ ಕಾಂಗ್ರೆಸ್ ಎಂದು ಸಚಿವ ಹೇಳಿದರು.
ಮಂಡ್ಯ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸಾಮಾನ್ಯವಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರರನ್ನು ಟೀಕಿಸಲ್ಲ ಅದೇನಿದ್ದರೂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮಾತ್ರ. ಅದರೆ, ಗೌಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತಾಡಿ ಕಡು ಭ್ರಷ್ಟ ಸರ್ಕಾರ ಅಂತ ಹೇಳಿರುವುದಕ್ಕೆ ರೊಚ್ಚಿಗೆದ್ದಿರುವ ಸಚಿವ ಈ ನಾಡಿನಲ್ಲಿ ಪ್ರಾಮಾಣಿಕ ಕುಟುಂಬ ಇರೋದಾದರೆ ಅದು ದೇವೇಗೌಡರ ಕುಟುಂಬ ಮಾತ್ರ ಅಂತ ಹೇಳಿ; ಅವರು ಹಿರಿಯರು ಅವರ ಬಗ್ಗೆ ಅಪಾರ ಗೌರವವಿದೆ, ಅವರಿಗೆ ದೇವರು ಇನ್ನೂ ಹತ್ತಾರು ವರ್ಷಗಳ ಆಯುಷ್ಯ ನೀಡಿ ಆಶೀರ್ವದಿಸಲಿ, ರಾಜ್ಯದ ಜನ ತಮ್ಮನ್ನು ಆಶೀರ್ವದಿಸುತ್ತಿದ್ದಾರೆ, ಇಳಿವಯಸ್ಸಿನಲ್ಲಿರುವ ಅವರ ಬಗ್ಗೆ ಮಾತಾಡೋದು ಸರಿಯಲ್ಲ, ಹಾಗೆ ನೋಡಿದರೆ ಮಾತಾಡಲು ಬೇಕಾದಷ್ಟಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಸಿ ನಾಲೆಗೆ ತಡೆಗೋಡೆ ನಿರ್ಮಿಸುವುದನ್ನು ಮಾತಾಡುವ ಬದಲು ಚಲುವರಾಯಸ್ವಾಮಿ ಬೇರೇನೋ ಮಾತಾಡುತ್ತಾರೆ!
Loading...
Unable to load recommendations.
Follow Us