ವಿಸಿ ನಾಲೆಗೆ ತಡೆಗೋಡೆ ನಿರ್ಮಿಸುವುದನ್ನು ಮಾತಾಡುವ ಬದಲು ಚಲುವರಾಯಸ್ವಾಮಿ ಬೇರೇನೋ ಮಾತಾಡುತ್ತಾರೆ!

ವಿಸಿ ನಾಲೆಗೆ ತಡೆಗೋಡೆ ನಿರ್ಮಿಸುವುದನ್ನು ಮಾತಾಡುವ ಬದಲು ಚಲುವರಾಯಸ್ವಾಮಿ ಬೇರೇನೋ ಮಾತಾಡುತ್ತಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 05, 2025 | 10:37 AM

ವಿಸಿ ನಾಲೆಗುಂಟ ವಾಹನಗಳಲ್ಲಿ ಹೋಗುವಾಗ ಯುವಕರು ಎಚ್ಚರಿಕೆಯಿಂದ ಡ್ರೈವ್ ಮಾಡಬೇಕೆಂದು ಸಚಿವ ಚಲುವರಾಯಸ್ವಾಮಿ ಹೇಳುತ್ತಾರೆ. ಸಚಿವ ಹೇಳೋದು ಸೆಕೆಂಡರಿ ವಿಷಯ. ನಾಲೆಗುಂಟ ವಾಹನಗಳು ಎಷ್ಟೇ ರಭಸದಲ್ಲಿ ಗುದ್ದಿದರೂ ಛಿದ್ರಗೊಳ್ಳದ ಶಕ್ತಿಯುತವಾದ ತಡೆಗೋಡೆಯನ್ನು ಅರ್ಜೆಂಟಾಗಿ ನಿರ್ಮಿಸಬೇಕಿದೆ. ಸಚಿವ ಮತ್ತು ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯರತರಾಗಬೇಕು

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಇಂದು ಕುಟುಂಬ ಸಮೇತ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮಗಳೊಡನೆ ಮಾತಾಡುವಾಗ ಅವರು ಪಾಂಡವಪುರದ ತಿಬ್ಬನಹಳ್ಳಿ ಬಳಿ ಕಾರೊಂದು ವಿಸಿ ನಾಲೆಗೆ ಉರುಳಿ ಬಿದ್ದು ಮಡಿದವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಯವರನ್ನು ವಿನಂತಿಸುವುದಾಗಿ ಹೇಳಿದರು. ವಿಸಿ ನಾಲೆಗೆ ತಡೆಗೋಡೆಗಳನ್ನು ನಿರ್ಮಿಸುವ ಕೆಲಸ ಗುತ್ತಿಗೆದಾರನಿಂದ ತಡವಾಗುತ್ತಿದೆ ಎಂದು ಸಚಿವ ಹೇಳುತ್ತಾರೆ. ಸ್ವಾಮಿ ಸಚಿವರೇ, ನೀವು ಹಣ ಬಿಡುಗಡೆ ಮಾಡಿದರೆ ತಾನೇ ಗುತ್ತಿಗೆದಾರ ಕೆಲಸ ಆರಂಭಿಸುವುದು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಕಾರು: ನಾಲ್ವರ ಪೈಕಿ ಮೂವರು ಸಾವು, ಓರ್ವನ ರಕ್ಷಣೆ