Video: ವಾಲ್ಪರಾಯ್ನಲ್ಲಿ ಜರ್ಮನ್ ಪ್ರವಾಸಿಗನ ಮೇಲೆ ಆನೆ ದಾಳಿ, ಸಾವು
ಅಣ್ಣಾಮಲೈ ಹುಲಿ ಅಭಯಾರಣ್ಯ ಪೊಲ್ಲಾಚಿ-ವಾಲ್ಪರೈ ರಸ್ತೆಯ ಟೈಗರ್ ವ್ಯಾಲಿ ಬಳಿ ಕಾಡು ಆನೆ ದಾಳಿಯಿಂದ ಜರ್ಮನ್ ಪ್ರವಾಸಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಮೈಕೆಲ್ ಜುರ್ಸೆನ್ ಎಂದು ಗುರುತಿಸಲಾಗಿದೆ. ಸಂಜೆ 6 ಗಂಟೆ ಸುಮಾರಿಗೆ ವಾಲ್ಪರೈ ಕಡೆಗೆ ಬಾಡಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಆನೆ ಎದುರಾಯಿತು. ಅನೇಕ ವಾಹನಗಳು ಆಗಮೇ ರಸ್ತೆ ಬದಿಗೆ ನಿಂತು ಆನೆ ಹೋಗುವುದನ್ನೇ ಕಾಯುತ್ತಿದ್ದವು.

ಆದರೆ ಜುರ್ಸೆನ್ ಬದಿಯಿಂದ ಹೋಗಿಬಿಡಬಹುದು ಎಂದು ಆನೆಯ ಬಳಿ ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಆಗ ಆನೆ ಅವರ ಮೇಲೆ ದಾಳಿ ನಡೆಸಿದೆ, ಬಿದ್ದ ಜುರ್ಸೆನ್ ಮತ್ತೆ ಎದ್ದು ಕಾಡಿನತ್ತ ಹೋಗಲು ಮುಂದಾದಾಗ ಆನೆ ಮತ್ತೆ ದಾಳಿ ನಡೆಸಿ ಹತ್ಯೆ ಮಾಡಿದೆ. ಹೇಗೋ ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದರಿಂದ ಸಾವನ್ನಪ್ಪಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ