ಹೆಚ್ ಡಿ ಕುಮಾರಸ್ವಾಮಿ ಮತ್ತು ಜಿಟಿ ದೇವೇಗೌಡ ನಡುವಿನ ವಿರಸವನ್ನು ದೊಡ್ಡಗೌಡರು ಕೊನೆಗಾಣಿಸಿದರು!
ಜೆಡಿಎಸ್ ಪಕ್ಷ ಆಯೋಜಿಸಿರುವ ಪಂಚರತ್ನ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ದೊಡ್ಡಗೌಡರೇ ದೊಡ್ಡ ಮನಸ್ಸು ಮಾಡಿ ಜಿಟಿ ದೇವೇಗೌಡ ಮನೆಗೆ ಹೋದಾಗ ಅದೊಂದು ಭಾವುಕ ಕ್ಷಣವಾಗಿ ಮಾರ್ಪಟ್ಟಿತು.
ಮೈಸೂರು: ಜೆಡಿಎಸ್ ಶಾಸಕ ಜಿಟಿ ದೇವೇಗೌಡ (GT Devegowda) ಮತ್ತು ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡರ (HD Devegowda) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವಿನ ವಿರಸ ಮತ್ತು ಜಿಟಿಡಿ ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ, ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಇಂದು ಅಂತಿಮ ತೆರೆ ಬಿದ್ದಂತಿದೆ ಮಾರಾಯ್ರೇ. ಮೈಸೂರಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿರುವ ಪಂಚರತ್ನ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ದೊಡ್ಡಗೌಡರೇ ದೊಡ್ಡ ಮನಸ್ಸು ಮಾಡಿ ಜಿಟಿ ದೇವೇಗೌಡ ಮನೆಗೆ ಹೋದಾಗ ಅದೊಂದು ಭಾವುಕ ಕ್ಷಣವಾಗಿ ಮಾರ್ಪಟ್ಟಿತು. ಪಕ್ಷದ ಅಧ್ಯಕ್ಷ ಸಿಬಿ ಇಬ್ರಾಹಿಂ ಪ್ರಾಸ್ತಾವಿಕ ಭಾಷಣದ ಬಳಿಕ ಜಿಟಿಡಿಯವರು ಮಾಜಿ ಪ್ರಧಾನಿಯವರ ಪಾದಮುಟ್ಟಿ ನಮಸ್ಕರಿಸುವ ಮೊದಲು ಅವರನ್ನು ಮತ್ತು ಕುಮಾರಸ್ವಾಮಿಯವರನ್ನು ಸತ್ಕರಿಸಿದರು.