ಬುಧವಾರ ರಾತ್ರಿ ಸುರಿದ ಭಾರಿ ಮಳೆ; ರಾಷ್ಟ್ರೀಯ ಹೆದ್ದಾರಿ-48 ತುಮಕೂರು ಬಳಿ ಸಂಪೂರ್ಣ ಜಲಾವೃತ
ಹೆದ್ದಾರಿಗೆ ಹತ್ತಿರದಲ್ಲಿರುವ ಕೆರೆಗಳೆಲ್ಲ ಉಕ್ಕಿ ಹರಿಯುತ್ತಿರುವುದರಿಂದ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ತುಮಕೂರು: ಘಾತಕ ಮಳೆ ಈ ವರ್ಷ ಎಡೆಬಿಡದೆ ಕಾಡುತ್ತಿದೆ ಮಾರಾಯ್ರೇ. ಬುಧವಾರ ರಾಜ್ಯದ ಹಲವಾರು ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ವಿಡಿಯೋನಲ್ಲಿ ನಿಮಗೆ ಕಾಣುತ್ತಿರೋದು ತುಮಕೂರು ಮೂಲಕ ಹಾದುಹೋಗುವ ಪುಣೆ-ಬೆಂಗಳೂರು 48 (Pune-Bengaluru) ರಾಷ್ಟ್ರೀಯ ಹೆದ್ದಾರಿ. ಹೆದ್ದಾರಿಗೆ (highway) ಹತ್ತಿರದಲ್ಲಿರುವ ಕೆರೆಗಳೆಲ್ಲ ಉಕ್ಕಿ ಹರಿಯುತ್ತಿರುವುದರಿಂದ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಹಂಚಿಹಳ್ಳಿ, ಹೆಬ್ಬಾಕ ಮೊದಲಾದ ಗ್ರಾಮಗಳಲ್ಲಿನ ಜಮೀನುಗಳಿಗೂ ಕೆರೆ ನೀರು ನುಗ್ಗಿ ನೂರಾರು ಎಕರೆಯಲ್ಲಿ ಬೆಳೆದ ಪೈರು ಸರ್ವನಾಶಗೊಂಡಿದೆ.
Latest Videos