Rains in Bengaluru: ಜಲಾವೃತ ರಸ್ತೆಯಲ್ಲಿ ಮಗಳೊಂದಿಗೆ ದ್ವಿಚಕ್ರವಾಹನದಿಂದ ಕೆಳಗೆ ಬಿದ್ದ ವ್ಯಕ್ತಿ ಪಾಲಿಕೆ ಅಧಿಕಾರಿಗಳ ಜನ್ಮ ಜಾಲಾಡಿದರು!
ಅವರು ಕೆಳಗೆ ಬಿದ್ದು ಗಾಯಮಾಡಿಕೊಂಡ ಕಾರಣ ಕೋಪದಲ್ಲಿ ಪಾಲಿಕೆ ಅಧಿಕಾರಿಗಳನ್ನು ಬಯ್ಯುತ್ತಿದ್ದಾರೆ ಅನಿಸಬಹುದು. ಆದರೆ, ಅವರ ಹೇಳುತ್ತಿರುವುದು ಅಕ್ಷರಶಃ ಸತ್ಯ ಅಂತ ಎಲ್ಲರೂ ಒಪ್ಪುತ್ತಾರೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಮ್ ಪಿ) (BBMP) ಆಧಿಕಾರಿಗಳ ಮುಖಕ್ಕೆ ಮಂಗಳಾರತಿ ಎತ್ತುತ್ತಿರುವ ಇವರ ಹೆಸರು ಮೂರ್ತಿ (Murthy) ಅಂತ. ಮಗಳನ್ನು ಶಾಲೆಗೆ ಬಿಡಲು ಹೋಗುವಾಗ ಇವರು ಶಿವಾನಂದ ಸರ್ಕಲ್ (Shivanand Circle) ಬಳಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ವಿಡಿಯೋವನ್ನು ನಾವು ನಿಮಗೆ ತೋರಿಸಿದ್ದೇವೆ. ಅವರು ಕೆಳಗೆ ಬಿದ್ದು ಗಾಯಮಾಡಿಕೊಂಡ ಕಾರಣ ಕೋಪದಲ್ಲಿ ಪಾಲಿಕೆ ಅಧಿಕಾರಿಗಳನ್ನು ಬಯ್ಯುತ್ತಿದ್ದಾರೆ ಅನಿಸಬಹುದು. ಆದರೆ, ಅವರ ಹೇಳುತ್ತಿರುವುದು ಅಕ್ಷರಶಃ ಸತ್ಯ ಅಂತ ಬೆಂಗಳೂರಿನ ಪ್ರತಿಯೊಬ್ಬ ನಿವಾಸಿ ಹೇಳುತ್ತಾನೆ.
Latest Videos