Hassan: ವ್ಯಕ್ತಿಯೊಬ್ಬ ಕಾರು ಅಡ್ಡಗಟ್ಟಿ ನಿಲ್ಲಿಸಿದ ಬಳಿಕ ತಮ್ಮಲ್ಲಿಗೆ ಬಂದ ವೃದ್ಧೆಯೊಬ್ಬಳಿಗೆ ಹೆಚ್ ಡಿ ಕುಮಾರಸ್ವಾಮಿ ಹಣ ನೀಡಿದರು!

Updated on: Mar 09, 2023 | 6:26 PM

ಆತ ಮಾತಾಡುತ್ತಿರುವಾಗಲೇ ಒಬ್ಬ ವೃದ್ಧ ಮಹಿಳೆ ಕುಮಾರಸ್ವಾಮಿಯವರಲ್ಲಿಗೆ ಬಂದು ಕೈ ಜೋಡಿಸಿ ನಮಸ್ಕರಿಸುತ್ತಾಳೆ. ಮಾಜಿ ಮುಖ್ಯಮಂತ್ರಿಗಳು ಒಂದಷ್ಟು ದುಡ್ಡನ್ನು ಅಜ್ಜಿಯ ಕೈಗಿಡುತ್ತಾರೆ.

ಹಾಸನ: ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ (Pancharatna Yatre) ಹಾಸನ ಜಿಲ್ಲೆಯಲ್ಲಿ ಸಾಗಿದೆ. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಅವರ ಕಾರ್ಯಕರ್ತರ ಕಾರು ಮತ್ತು ವಾಹನಗಳು ಜಿಲ್ಲೆಯ ಗ್ರಾಮವೊಂದರ ಮೂಲಕ ಹಾದುಹೋಗುವಾಗ ಅಲ್ಲಿನ ಕೆಲ ಮಹಿಳೆಯರು ಕುಮಾರಸ್ವಾಮಿ ಜೊತೆ ಮಾತಾಡುತ್ತಾರೆ. ಅವರ ಕಾರು ಅಲ್ಲಿಂದ ಹೊರಡುವಾಗ ವ್ಯಕ್ತಿಯೊಬ್ಬ ಅದರ ಎದುರು ಹೋಗಿ ನಿಲ್ಲುತ್ತಾನೆ. ಕಾರು ನಿಂತ ಬಳಿಕ ಕುಮಾರಸ್ವಾಮಿ ಮುಂಭಾಗದಲ್ಲಿ ಕುಳಿತಿರುವುದನ್ನು ಕಂಡ ಆ ವ್ಯಕ್ತಿ ವಿಂಡೋ ಬಳಿ ಹೋಗಿ ಅವರೊಂದಿಗೆ ಮಾತಾಡುತ್ತಾನೆ. ಆತ ಮಾತಾಡುತ್ತಿರುವಾಗಲೇ ಒಬ್ಬ ವೃದ್ಧ ಮಹಿಳೆ (old woman) ಕುಮಾರಸ್ವಾಮಿಯವರಲ್ಲಿಗೆ ಬಂದು ಕೈ ಜೋಡಿಸಿ ನಮಸ್ಕರಿಸುತ್ತಾಳೆ. ಮಾಜಿ ಮುಖ್ಯಮಂತ್ರಿಗಳು ಒಂದಷ್ಟು ದುಡ್ಡನ್ನು ಅಜ್ಜಿಯ ಕೈಗಿಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ