HD Kumaraswamy: ದ್ವೇಷ ಮತ್ತು ಹಿಂಸೆ ಬಿಜೆಪಿ ನಾಯಕರ ಹಿಡನ್ ಅಜೆಂಡಾ: ಹೆಚ್ ಡಿ ಕುಮಾರಸ್ವಾಮಿ

| Updated By: Digi Tech Desk

Updated on: Feb 16, 2023 | 1:19 PM

ಆವೇಶದಲ್ಲಿ ಮಾತಾಡುವಾಗ ಅವರ ಹೃದಯದಲ್ಲಿರೋದು ಹೊರಗೆ ಬರುತ್ತದೆ, ದ್ವೇಷ ಮತ್ತು ಹಿಂಸೆಯೇ ಅವರ ಹಿಡನ್ ಅಜೆಂಡ, ಜನರ ಮುಂದೆ ಮಾತ್ರ ಮುಖವಾಡ ಧರಿಸಿ ಬರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಬಿಜೆಪಿ ನಾಯಕರಾಗಿರುವ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಮತ್ತು ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನವರನ್ನೂ (Siddaramaiah) ಮುಗಿಸಿಬಿಡೋಣ ಅಂತ ವಿವಾದಾತ್ಮಕ ಹೇಳಿಕೆ ನೀಡುತ್ತಿರೋದು ಕಾಂಗ್ರೆಸ್ ಅಲ್ಲದೆ ಬೇರೆ ಪಕ್ಷಗಳನ್ನೂ ಕೆರಳಿಸಿದೆ. ಇಂದು ನಗರದಲ್ಲಿ ಮಾಧ್ಯಮಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು, ಬಿಜೆಪಿ ನಾಯಕರ ಮಾತು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಹೇಳಿದರು. ಆವೇಶದಲ್ಲಿ ಮಾತಾಡುವಾಗ ಅವರ ಹೃದಯದಲ್ಲಿರೋದು ಹೊರಗೆ ಬರುತ್ತದೆ, ದ್ವೇಷ ಮತ್ತು ಹಿಂಸೆಯೇ ಅವರ ಹಿಡನ್ ಅಜೆಂಡ, ಜನರ ಮುಂದೆ ಮಾತ್ರ ಮುಖವಾಡ ಧರಿಸಿ ಬರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 16, 2023 12:51 PM