ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಡಿಕೆ ಶಿವಕುಮಾರ್​​ಗೆ ಕುಮಾರಸ್ವಾಮಿ ಟಾಂಗ್

|

Updated on: Sep 28, 2024 | 3:08 PM

ಡಿನೋಟಿಫಿಕೇಷನ್​ ವಿಚಾರದಲ್ಲಿ ನಿಮ್ಮನ್ನು ಸಿಲುಕಿಸಿಹಾಕಿಸಲು ಹೊರಟಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ವಿರುದ್ಧವೂ ಕಿಡಿಕಾರಿದರು. ಡಿಕೆ ಶಿವಕುಮಾರ್​ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನೆಂದು ಇಲ್ಲಿ ನೋಡಿ.

ಬೆಂಗಳೂರು, ಸೆಪ್ಟೆಂಬರ್ 28: ನನ್ನ ವಿರುದ್ಧ ಪಿತೂರಿ ಮಾಡಲು ಎಲ್ಲರೂ ಸೇರಿಕೊಂಡಿದ್ದಾರೆ. ಆದರೆ, ಡಿನೋಟಿಫಿಕೇಷನ್​ ಪ್ರಕರಣದಲ್ಲಿ ಯಾರೂ ನನ್ನನ್ನು ಸಿಲುಕಿಸಿ ಹಾಕಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ತನಿಖೆ ಬೇಕಾದರೂ ಮಾಡಲಿ, ನನಗೆ ಭಯವಿಲ್ಲ. 12 ವರ್ಷಗಳಾಗಿವೆ ತನಿಖೆ ವರದಿ ಇಟ್ಟುಕೊಂಡು ಕಡುಬು ಕಡೆಯುತ್ತಿದ್ದಾರೆ. ನಾನು ಇವರ ತನಿಖೆ ಪನಿಖೆಗೆ ಎಲ್ಲ ಹೆದರಲ್ಲ ಎಂದರು.

ರಾಜ್ಯಪಾಲರ ಕಚೇರಿ ಅಧಿಕಾರಿಗಳ ತನಿಖೆಗೆ ಲೋಕಾಯಕ್ತ ಮುಂದಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವಾಗ ಈ ರಾಜ್ಯದಲ್ಲಿ ಕೊತ್ವಾಲನ ಜತೆ ಇದ್ದೋರು ಬದ್ದೋರೆಲ್ಲ ಬಂದು ವಿಧಾನಸೌಧ ಸೇರಿಕೊಂಡರೋ ಆವಾಗಿನಿಂದ ಹೀಗೆಯೇ ಎಂದರು. ಸಿಬಿಐ ತನಿಖೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಸಿಬಿಐವರು ಈಗ ಕರ್ನಾಟಕಕ್ಕೆ ಬರುವ ಹಾಗೆಯೇ ಇಲ್ಲವಲ್ಲ ಎಂದರು ನಕ್ಕರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ