ಕಣ್ಣೀರು ಹಾಕುತ್ತಾ ಕೋರ್ಟ್ ಹಾಲ್ನಿಂದ ಹೊರಬಂದ ಎಚ್.ಡಿ. ರೇವಣ್ಣ; ಮೇ 14ರವರೆಗೆ ಪರಪ್ಪನ ಅಗ್ರಹಾರ ಜೈಲುವಾಸ
HD Revanna in tears at court: ಲೈಂಗಿಕ ಕಿರುಕುಳ ಮತ್ತು ಕಿಡ್ನಾಪಿಂಗ್ ಕೇಸ್ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಪೊಲೀಸ್ ಕಸ್ಟಡಿಯಿಂದ ಜುಡಿಶಿಯಲ್ ಕಸ್ಟಡಿಗೆ ವರ್ಗವಾಗಿದ್ದಾರೆ. ಮೇ 4ರಂದು ಬಂಧಿತರಾಗಿದ್ದ ಅವರು ಮೇ 8ರವರೆಗೂ ಪೊಲೀಸ್ ಕಸ್ಟಡಿಗೆ ಕೊಡಲಾಗಿತ್ತು. ಇವತ್ತು ಅವರನ್ನು ಮೇ 14ರವರೆಗೂ ನ್ಯಾಯಾಂಗ ವಶಕ್ಕೆ ಕೊಡಲಾಗಿದೆ. ಜನಪ್ರತಿನಿಧಿ ನ್ಯಾಯಾಲಯದಲ್ಲಿ ನಾಳೆ ಗುರುವಾರ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನು ಸಿಗದಿದ್ದರೆ 14ರವರೆಗೂ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಬೇಕಾಗುತ್ತದೆ.
ಬೆಂಗಳೂರು, ಮೇ 8: ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಎಚ್.ಡಿ. ರೇವಣ್ಣ (HD Revanna) ಅವರಿಗೆ 7 ದಿನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ಎಚ್.ಡಿ. ರೇವಣ್ಣ ಅವರನ್ನು ಮೇ 4ರಂದು ಬಂಧಿಸಲಾಗಿತ್ತು. ಮೇ 8ರವರೆಗೆ ಅವರಿಗೆ ಎಸ್ಐಟಿ ಕಸ್ಟಡಿಗೆ ಕೊಡಲಾಗಿತ್ತು. ಕಸ್ಟಡಿ ಅವಧಿ ಮುಗಿದ ಕಾರಣ ಅವರನ್ನು 17ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಾಯಿತು. ರೇವಣ್ಣರನ್ನು ಮೇ 14ರವರೆಗೆ, ಅಂದರೆ ಏಳು ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲು ಕೋರ್ಟ್ ತೀರ್ಪು ನೀಡಿದೆ. ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಎಚ್.ಡಿ. ರೇವಣ್ಣಗೆ ಈ ತೀರ್ಪು ಅನಿರೀಕ್ಷಿತವಾಗಿತ್ತು. ಕಣ್ಣೀರು ಹಾಕುತ್ತಲೇ ಅವರು ಕೋರ್ಟ್ನಿಂದ ಹೊರಬಂದರು. ಎಸ್ಐಟಿ ಪೊಲೀಸರು ರೇವಣ್ಣರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ.
ಈ ಮಧ್ಯೆ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಎಚ್.ಡಿ. ರೇವಣ್ಣ ಪರ ವಕೀಲರು ಜಾಮೀನು ಅರ್ಜಿ ಹಾಕಿದ್ದಾರೆ. ಇವತ್ತು ಅದರ ವಿಚಾರಣೆ ಇತ್ತು. ನಾಳೆಗೆ ಮುಂದೂಡಿಕೆ ಆಗಿದೆ. ನಾಳೆ ಅವರಿಗೆ ಜಾಮೀನು ಸಿಕ್ಕರೆ ಬಿಡುಗಡೆಯ ಭಾಗ್ಯ ಸಿಗುತ್ತದೆ. ಇಲ್ಲದಿದ್ದರೆ ಮೇ 14ರವರೆಗೆ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಾಗುತ್ತದೆ.
ಇದನ್ನೂ ಓದಿ: ಕಿಡ್ನಾಪ್ ಪ್ರಕರಣ: ಮೇ 14ರವರೆಗೆ ಹೆಚ್ಡಿ ರೇವಣ್ಣಗೆ ನ್ಯಾಯಾಂಗ ಬಂಧನ
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ