Rags to riches: ದೆಹಲಿಯಲ್ಲಿ ಉಪಜೀವನಕ್ಕಾಗಿ ಸೈಕಲ್ ರಿಕ್ಷಾ ತುಳಿಯುತ್ತಿದ್ದ ವ್ಯಕ್ತಿ ಸಂಸ್ಥೆಯೊಂದನ್ನು ಸ್ಥಾಪಿಸಿ ಐಐಟಿ ಪದವೀಧರರಿಗೆ ನೌಕರಿ ನೀಡುತ್ತಿದ್ದಾರೆ!
ನಿರಾಕರಣೆಯಿಂದ ತೀವ್ರವಾಗಿ ನೊಂದ ಕುಮಾರ್ ಹಳ್ಳಿಗೆ ವಾಪಸ್ಸು ಹೋಗಿ ಒಂದು ಸೆಕೆಂಡ್ ಹ್ಯಾಂಡ್ ಟಾಟಾ ಕಾರನ್ನಿಟ್ಟುಕೊಂಡು RodBez ಸಂಸ್ಥೆಯನ್ನು ಪ್ರಾರಂಭಿಸಿದರು.
ಕೆಲವೇ ವರ್ಷಗಳ ಹಿಂದೆ ಬಿಹಾರ ರಾಜ್ಯದ ಬಿಹಾರ ರಾಜ್ಯದ ಹೆಸರಿನ ಬಿಹಾರ ದಿಲ್ಕುಷ್ ಕುಮಾರ್ (Dikush Kumar) ಹೆಸರಿನ ಈ ವ್ಯಕ್ತಿ ಉಪಜೀವನ ನಡೆಸಲು ಸೈಕಲ್ ರಿಕ್ಷಾ (cycle rickshaw) ತುಳಿಯುತ್ತಿದ್ದರು. ಸಹರ್ಸಾ ಎಂಬ ಚಿಕ್ಕ ಗ್ರಾಮದವರಾಗಿರುವ ಕುಮಾರ್ ಈಗ ಬಿಹಾರ ರಾಜ್ಯದಲ್ಲಿ ಟ್ಯಾಕ್ಸಿ ಸೇವೆ (taxi service) ಒದಗಿಸುವ RodBez ಹೆಸರಿನ ಸಂಸ್ಥೆಯ ಸಿಈಓ ಆಗಿದ್ದಾರೆ. ಕುಮಾರ ಒಬ್ಬ ಡ್ರೈವರ್ ಮಗನಾಗಿದ್ದು ಕೆಲಸ ಹುಡುಕಿಕೊಂಡು ದೆಹಲಿಗೆ ಬಂದು ದಿನವೊಂದಕ್ಕೆ ರೂ. 35 ಬಾಡಿಗೆಯ ರಿಕ್ಷಾ ತುಳಿಯುತ್ತಿದ್ದರು.
‘ಸುಮಾರು 15 ದಿನಗಳವರೆಗೆ ಒಂದು ರಿಕ್ಷಾವನ್ನು ಬಾಡಿಗೆ ಪಡೆದು ದೆಹಲಿಯ ಓಣಿಗಳಲ್ಲಿ ತುಳಿಯುತ್ತಿದ್ದೆ. ಸವಾರಿಗಾಗಿ ನಾನು ಸಣಕಲು ವ್ಯಕ್ತಿಗಳನ್ನು ಅರಸುತ್ತಿದ್ದೆ. ಆದರೆ, ಅಸ್ವಸ್ಥೆಯ ಕಾರಣ ವಾಪಸ್ಸು ಊರಿಗೆ ಹೋಗಬೇಕಾಯಿತು,’ ಎಂದು ದಿಲ್ಕುಷ್ ಕುಮಾರ್ ಹೇಳುತ್ತಾರೆ.
ಊರಿಗೆ ವಾಪಸ್ಸು ಹೋದ ಮೇಲೆ ಕುಮಾರ್ ಸ್ವಲ್ಪ ಸಮಯದವರೆಗೆ ರಸ್ತೆಬದಿ ನಿಂತು ತಳ್ಳುಬಂಡಿಯಲ್ಲಿ ತರಕಾರಿ ಮಾರಿದರು. ಆದರೆ, ಪಾಟ್ನಾದಲ್ಲಿ ಅವರು ಚಪಾರಾಸಿ ಹುದ್ದೆಗೆ ಇಂಟರ್ ವ್ಯೂ ನೀಡಲು ಹೋದಾಗ ಅವರ ಬದುಕಿನ ಚಿತ್ರಣವೇ ಬದಲಾಯಿತು.
‘ಪಾಟ್ನಾದ ಖಾಸಗಿ ಶಾಲೆಯೊಂದರ ಪ್ಯೂನ್ ಹುದ್ದೆ ಅದಾಗಿತ್ತು. ಇವತ್ತಿನ ಭಾಷೆಯಲ್ಲಿ ಹೇಳೋದಾದರೆ ಅದು ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಅನಿಸಿಕೊಳ್ಳುತ್ತದೆ. ಬದುಕಿನ ಹೆಚ್ಚಿನ ಭಾಗವನ್ನು ನಾನು ಹಳ್ಳಿಯಲ್ಲಿ ಕಳೆದಿದ್ದೇನೆ. ಹಾಗಾಗಿ ನೋಡಲು ನಾನು ಗ್ರಾಮಸ್ಥನಂತೆ ಕಾಣುತ್ತಿದ್ದೆ. ಇಸ್ತ್ರಿ ಕಾಣದ ಮುದ್ದೆ ಮುದ್ದೆಯಾಗಿದ್ದ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದೆ. ಆಗ ಮಳೆ ಸುರಿಯುತ್ತಿದ್ದರಿಂದ ನಾನು ಕೊಂಚ ನೆಂದಿದ್ದೆ. ನನ್ನ ವೇಷಭೂಷಣ ನೋಡಿ ಅವರು ಹುದ್ದೆಗೆ ಸೂಕ್ತವಾದ ವ್ಯಕ್ತಿಯಲ್ಲವೆಂದು ಅದಾಗಲೇ ನಿರ್ಧರಿಸಿಬಿಟ್ಟಿದ್ದರು, ನನಗೂ ಕೆಲಸ ಸಿಗಲಾರದು ಅಂತ ಖಚಿತವಾಗಿತ್ತು,’ ಎಂದು ಕುಮಾರ್ ಹೇಳುತ್ತಾರೆ.
ಅವರ ನಿರಾಕರಣೆಯಿಂದ ತೀವ್ರವಾಗಿ ನೊಂದ ಕುಮಾರ್ ಹಳ್ಳಿಗೆ ವಾಪಸ್ಸು ಹೋಗಿ ಒಂದು ಸೆಕೆಂಡ್ ಹ್ಯಾಂಡ್ ಟಾಟಾ ಕಾರನ್ನಿಟ್ಟುಕೊಂಡು RodBez ಸಂಸ್ಥೆಯನ್ನು ಪ್ರಾರಂಭಿಸಿದರು.
‘ಆರಂಭದಲ್ಲಿ ಜನರಿಗೆ ಕ್ಯಾಬ್ ಸೇವೆಯ ಪರಿಕಲ್ಪನೆ ಅರ್ಥವಾಗಲಿಲ್ಲ, ಯಾಕೆಂದರೆ ಅವರಿಗೆ ಕಾರುಗಳನ್ನು ಬಾಡಿಗೆ ಪಡೆಯುವುದು ಮಾತ್ರ ಗೊತ್ತಿತ್ತು. ಆದರೆ 5-6 ವರ್ಷಗಳ ಪರಿಶ್ರಮದ ನಂತರ ಉತ್ತರ ಬಿಹಾರ ನಲ್ಲಿ ನಮ್ಮ ಸಂಸ್ಥೆ ತನ್ನದೇ ಆದ ಛಾಪು ಮೂಡಿಸಿತು,’ ಎಂದು ಕುಮಾರ್ ಹೇಳುತ್ತಾರೆ.
ಬಿಹಾರದ ಮಿಥಿಲಾ ಪ್ರಾಂತ್ಯದಲ್ಲಿ ವೃತ್ತಿಪರರ ಗುಂಪೊಂದು ಸ್ಥಾಪಿಸಿರುವ ಮಿಥಿಲಾ ಏಂಜೆಲ್ ನೆಟ್ ವರ್ಕ್ ನಿಂದ RodBez ರೂ. 46 ಲಕ್ಷ ಹಣ ಪಡೆದಿದೆ. ಮಿಥಿಲಾದಲ್ಲಿ ಸ್ಥಾಪನೆಗೊಳ್ಳುವ ಸ್ಟಾರ್ಟಪ್ ಗಳಲ್ಲಿ ನಿವೇಶನ ಹೂಡಿ ಪ್ರಾಂತ್ಯದ ಎಕಾನಾಮಿಯನ್ನು ಬಲಪಡಿಸುವ ಉದ್ದೇಶವನ್ನು ಮಿಥಿಲಾ ನೆಟ್ವರ್ಕ್ ಹೊಂದಿದೆ.
ಇದನ್ನೂ ಓದಿ: ದೇಶವೊಂದೇ, ಎಲ್ಲಾ ರಾಜ್ಯದ ಸಂಸ್ಕೃತಿಯ ಅಪ್ಪಿಕೊಳ್ಳಬೇಕು-ಒಪ್ಪಿಕೊಳ್ಳಬೇಕು ಎಂದು ಒಗ್ಗಟ್ಟಿನ ಮಂತ್ರ ಸಾರುತ್ತಿರುವ ಪ್ರಧಾನಿ ಮೋದಿ
‘ಸುಮಾರು 8 ತಿಂಗಳ ಹಿಂದೆ ನಾನು ರೂ. 4 ಕೋಟಿ ಹಣ ಸಾಲ ಪಡೆದಿದ್ದೇನೆ. ಮುಂದಿನ 18 ತಿಂಗಳಲ್ಲಿ Roadbez ಸಂಸ್ಥೆಯನ್ನು ರೂ. 100 ಕೋಟಿ ಸಂಸ್ಥೆಯಾಗಿ ಬೆಳೆಸಿ ಬಿಹಾರದಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಟ್ಯಾಕ್ಸಿ ಸೇವೆ ಒದಗಿಸುವ 600-700 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ,’ ಎಂದು ಕುಮಾರ್ ಹೇಳುತ್ತಾರೆ.
ಕುಮಾರ ಓದಿದ್ದು 12ನೇ ಕ್ಲಾಸ್ ವರೆಗೆ ಮಾತ್ರ. ಅದರೆ ಗುವಹಾಟಿಯ ಐಐಟಿ ಪದವೀಧರರಿಗೆ ಅವರು RodBez ನಲ್ಲಿ ನೌಕರಿ ನೀಡುತ್ತಿದ್ದಾರೆ. ಐಐಎಮ್ ಪದವೀಧರರು ಸಹ ತಮ್ಮ ಸಂಸ್ಥೆ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಕುಮಾರ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ