Tirupathi: ತಿರುಪತಿಯಲ್ಲಿ ಪ್ರವಾಹದ ಪರಿಸ್ಥಿತಿ, ಗುಡ್ಡಗಳಿಂದ ಭೋರ್ಗರೆಯುತ್ತಿರುವ ನೀರು; ವಿಡಿಯೋ ನೋಡಿ
TTD: ತಿರುಪತಿಯಲ್ಲಿ ಭಾರಿ ಮಳೆಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ತಿರುಪತಿ: ತಿರುಮಲ ತಿರುಪತಿಯಲ್ಲಿ ಭಾರಿ ಮಳೆಯ ಕಾರಣ, ಎರಡು ದಿನ ಭಕ್ತರಿಗೆ ದೇವರ ದರ್ಶನವನ್ನು ಬಂದ್ ಮಾಡಲಾಗಿದೆ. ಭಾರಿ ಮಳೆಯಿಂದ ತಿರುಪತಿ ಘಾಟ್ ರಸ್ತೆಗೆ ಹಾನಿಯಾಗಿದ್ದು, ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಟಿಟಿಡಿ ದುರಸ್ತಿಗೊಳಿಸುತ್ತಿದೆ. ರಸ್ತೆ ರಿಪೇರಿ ಕಾರ್ಯ ಮುಗಿದ ಬಳಿಕ ಸಂಚಾರಕ್ಕೆ ಮುಕ್ತವಾಗಲಿದೆ. ಇಂದು ಮಧ್ಯಾಹ್ನದ ವೇಳೆಗೆ ರಸ್ತೆ ದುರಸ್ತಿ ಕಾರ್ಯ ಮುಗಿಯುವ ಸಾಧ್ಯತೆ ಇದೆ. ಆದರೆ ಇಂದಿನಿಂದ ಎರಡು ದಿನಗಳ ಕಾಲ ಭಕ್ತರಿಗೆ ತಿರುಪತಿ ತಿಮ್ಮಪ್ಪ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ಇಂದು ದೇವಸ್ಥಾನದ ಕಛೇರಿಗೆ ರಜೆ ಘೋಷಿಸಲಾಗಿದೆ.
ಭಾರಿ ಮಳೆಯಿಂದ ಟಿಟಿಡಿಯ ಸುತ್ತಮುತ್ತ ಗುಡ್ಡಗಳಿಂದ ಅಪಾರ ಪ್ರಮಾಣದಲ್ಲಿ ನೀರು ಧುಮ್ಮಿಕ್ಕುತ್ತಿದೆ. ಇಂದು ಮನೆಯಿಂದ ಜನರು ಹೊರಬರದಂತೆ ತಿಳಿಸಲಾಗಿದೆ. ಆಂಧ್ರ ಸಿಎಂ ಜಗನ್ ಮೋಹನ ರೆಡ್ಡಿ ಪರಿಹಾರ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಾತ್ರಾರ್ಥಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಉಚಿತ ಆಶ್ರಯ ಹಾಗೂ ಆಹಾರ ನೀಡುತ್ತಿದೆ.
ಭಾರಿ ಮಳೆಯಿಂದ ಗುಡ್ಡಗಳಿಂದ ಭೋರ್ಗರೆಯುತ್ತಿರುವ ನೀರು; ವಿಡಿಯೋ ವರದಿ ಇಲ್ಲಿದೆ:
ಇದನ್ನೂ ಓದಿ:
Tirupathi: ಭಾರಿ ಮಳೆಯಿಂದ ಟಿಟಿಡಿಯ 2 ಘಾಟ್ಗಳು ಕ್ಲೋಸ್; ಮನೆಗಳಿಂದ ಹೊರಗೆ ಬಾರದಂತೆ ತಿರುಪತಿ ಜನರಿಗೆ ಸೂಚನೆ