ಮಂಡ್ಯದಲ್ಲಿ ಸಾಯಂಕಾಲದಿಂದ ಜೋರು ಮಳೆ, ಹರ್ಷದ ಅಲೆಯಲ್ಲಿ ತೇಲುತ್ತಿರುವ ರೈತ ಸಮುದಾಯ!

|

Updated on: May 22, 2024 | 7:41 PM

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಲು ಸಿನಿಮಾ ನಟ ದರ್ಶನ್ ಬಂದಾಗ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಾಗಿತ್ತು ಮತ್ತು ಅದನ್ನು ನಾವು ವರದಿ ಮಾಡಿದ್ದೆವು. ಜಿಲ್ಲೆಯಲ್ಲಿ ಪ್ರತಿದಿನ ಸತತವಾಗಿ ಮಳೆಯಾಗುತ್ತಿರುವುದು ರೈತರಲ್ಲಿ ಹರ್ಷೋಲ್ಲಾಸ ಮೂಡಿಸಿದೆ.

ಮಂಡ್ಯ: ಮಂಡ್ಯ ನಗರದ (Mandya city limits) ಪ್ರದೇಶದಲ್ಲಿ ಇಂದು ಸಾಯಂಕಾಲ ಜೋರು ಮಳೆಯಾಗಿದೆ. ನಾಡಿನ ಜೀವನದಿ ಕಾವೇರಿ (River Cauvery) ಒಡಲು ತುಂಬಿಕೊಳ್ಳಲು ಮಂಡ್ಯ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಬೇಕು. ಹಾಗೆ ನೋಡಿದರೆ ಮಂಡ್ಯ ಜಿಲ್ಲೆಯಲ್ಲಿ ಕಳೆದ ಒಂದು ವಾರಕ್ಕೂ ಹೆಚ್ಚಿನ ಅವಧಿಯಿಂದ ಮಳೆಯಾಗುತ್ತಿದೆ. ನಿಮಗೆ ನೆನಪಿರಬಹುದು ಬೇಸಿಗೆಯ ಅಕಾಲಿಕ ಮಳೆ ಮೊದಲು ಸುರಿದಿದ್ದು ಮಂಡ್ಯ ಜಿಲ್ಲೆಯಲ್ಲೇ. ಲೋಕಸಭಾ ಚುನಾವಣೆಗಾಗಿ ಮೊದಲ ಹಂತದ ಮತದಾನ ನಡೆಯುವುದಕ್ಕಿಂತ ಮೊದಲು ಸಕ್ಕರೆ ನಗರಿಯಲ್ಲಿ ಮಳೆಯಾಗಿತ್ತು. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಲು ಸಿನಿಮಾ ನಟ ದರ್ಶನ್ (actor Darshan) ಬಂದಾಗ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಾಗಿತ್ತು ಮತ್ತು ಅದನ್ನು ನಾವು ವರದಿ ಮಾಡಿದ್ದೆವು. ಜಿಲ್ಲೆಯಲ್ಲಿ ಪ್ರತಿದಿನ ಸತತವಾಗಿ ಮಳೆಯಾಗುತ್ತಿರುವುದು ರೈತರಲ್ಲಿ ಹರ್ಷೋಲ್ಲಾಸ ಮೂಡಿಸಿದೆ. ಓಕೆ ರಾಜ್ಯಾದಂತ ಮಳೆಯಗುತ್ತಿದೆ ಮತ್ತು ಬಿಸಿಲಿನ ಬೇಗೆಯಿಂದ ತತ್ತಿರಿಸಿದ್ದ ಜನ ಖುಷಿಯಿಂದ ಬೀಗುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೊಪ್ಪಳ ಮತ್ತು ಸುತ್ತಮುತ್ತಲ ಏರಿಯಾಗಳಲ್ಲಿ ಜೋರು ಮಳೆ, ಬೇಸಿಗೆಯ ಧಗೆಯಿಂದ ಕಂಗೆಟ್ಟಿದ್ದ ಜನರಲ್ಲಿ ಸಂತಸ