ಉಡುಪಿಯಲ್ಲೂ ಧಾರಾಕಾರ ಮಳೆ, ಜಿಲ್ಲಾಧಿಕಾರಿಗಳಿಂದ ಎರಡು ದಿನ ರೆಡ್ ಅಲರ್ಟ್ ಘೋಷಣೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 17, 2022 | 11:10 PM

ಮುಂದಿನ ಎರಡು ದಿನಗಳ ಕಾಲ ಜನ ಮನೆಯಿಂದ ಹೊರ ಬರದಿರಲು ಸೂಚನೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯುವ ದುಸ್ಸಾಹಸ ಮಾಡಬಾರದೆಂದು ಎಚ್ಚರಿಸಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಶುಕ್ರವಾರ ಸಾಯಂಕಾಲದವರೆಗೆ ಮಳೆಯಾಗಲಿದೆ.

Udupi: ಈ ವಾರವೆಲ್ಲ ಮಳೆಯಾಗಲಿದೆ. ಸೋಮವಾರದಿಂದ 5 ದಿನಗಳವರೆಗೆ ಭಾರಿ ಮಳೆಯಾಗಲಿದೆ ಭಾರತೀಯ ಹವಾಮಾನ ಮುನ್ಸೂಚನೆ ನೀಡಿದೆ ಮತ್ತು ಅದರ ಸೂಚನೆ ಪ್ರಕಾರವೇ ರಾಜ್ಯದಾದ್ಯಂತ ಮಳೆಯಾಗುತ್ತಿದೆ. ಬೆಂಗಳೂರಲ್ಲ್ಲಿ ಮಂಗಳವಾರ ಸಾಯಂಕಾಲದಿಂದ ಒಂದೇ ಸಮ ಮಳೆ ಸುರಿಯುತ್ತಿದೆ. ನಾವಿಲ್ಲಿ ಉಡುಪಿ (Udupi) ನಗರದ ದೃಶ್ಯಗಳನ್ನು ತೋರಿಸುತ್ತಿದ್ದೇವೆ. ಕರಾವಳಿ ಪ್ರದೇಶದ (coastal belt) ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಮೇ 18 ಮತ್ತು 19 ರಂದು ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾ ವಿಪತ್ತ ನಿರ್ವಹಣಾ ಪ್ರಾಧಿಕಾರದ ಸಲಗೆ ಮೇರೆಗೆ ಉಡುಪು ಜಿಲ್ಲಾಧಿಕಾರಿ ಕೂರ್ಮಾರಾವ್ ಎಮ್ (Kurmarao M) ಆದೇಶ ಹೊರಡಿಸಿದ್ದಾರೆ.

ಮುಂದಿನ ಎರಡು ದಿನಗಳ ಕಾಲ ಜನ ಮನೆಯಿಂದ ಹೊರ ಬರದಿರಲು ಸೂಚನೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯುವ ದುಸ್ಸಾಹಸ ಮಾಡಬಾರದೆಂದು ಎಚ್ಚರಿಸಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಶುಕ್ರವಾರ ಸಾಯಂಕಾಲದವರೆಗೆ ಮಳೆಯಾಗಲಿದೆ. ಅದರೆ ಬುಧವಾರ ಮತ್ತು ಗುರುವಾರ ಕರಾವಳಿ ಪ್ರಾಂತ್ಯದಲ್ಲಿ ಧಾರಾಕಾರವಾಗಿ ಮಳೆ ಸುರಿಯಲಿದೆ.

ಮಂಗಳವಾರವೂ ಉಡುಪಿಯಲ್ಲಿ ಜೋರಾಗಿ ಮಳೆಯಾಯಗುತಿತ್ತು. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ:   ಮೈಸೂರಿನಲ್ಲಿ ಮುಂದುವರೆದ ಮಳೆಯ ಆರ್ಭಟ: ಕುಸಿದು ಬಿದ್ದ ಮೋರಿಯ ಸೇವತುವೆ, ರಸ್ತೆಯಲ್ಲಿ ನಿಂತ ಮಳೆ ನೀರಲ್ಲಿ ಪುಟಾಣಿ ಬಾಲಕಿ ಡ್ಯಾನ್ಸ್