ಇದೇ ಮೊದಲ ಬಾರಿಗೆ ಹಾಸನಾಂಬೆ ಉತ್ಸವದಲ್ಲಿ ಹೆಲಿಟೂರಿಸಂ: ಜನರು ಫುಲ್​ ಖುಷ್​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2023 | 9:03 PM

ಹಾಸನ ಯೋಜನೆಯ ಹೆಲಿ ಟೂರಿಸಂಗೂ ಕೂಡ ಚಾಲನೆ ನೀಡಲಾಗಿದೆ. ಹೆಲಿಕಾಪ್ಟರ್​ನಲ್ಲಿ ಹಾರಾಟ ನಡೆಸುವ ಮೂಲಕ ಡಿಸಿ ಸಿ ಸತ್ಯಭಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಒಬ್ಬರಿಗೆ ಒಂದು ಸುತ್ತಿಗೆ 4300 ದರ ನಿಗದಿ ಮಾಡಲಾಗಿದ್ದು, ನಗರದಲ್ಲಿ ಆರು ನಿಮಿಷಗಳ ಕಾಲ ಹಾಸನಾಂಬೆ ದೇಗುಲ‌ ವ್ಯಾಪ್ತಿಯಲ್ಲಿ ಹಾರಾಟ ನಡೆಸಲಿದೆ.

ಹಾಸನ, ನವೆಂಬರ್​​​​ 03: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ (Hasanamba Utsav) ಸಾರ್ವಜನಿಕ ದರ್ಶನಕ್ಕೆ ಇಂದು ಭವ್ಯ ಚಾಲನೆ ಸಿಕ್ಕಿದೆ. ಜೊತೆಗೆ ಆಗಸದಿಂದ ಹಾಸನ ಯೋಜನೆಯ ಹೆಲಿ ಟೂರಿಸಂಗೂ ಕೂಡ ಚಾಲನೆ ನೀಡಲಾಗಿದೆ. ಹೆಲಿಕಾಪ್ಟರ್​ನಲ್ಲಿ ಹಾರಾಟ ನಡೆಸುವ ಮೂಲಕ ಡಿಸಿ ಸಿ ಸತ್ಯಭಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಒಬ್ಬರಿಗೆ ಒಂದು ಸುತ್ತಿಗೆ 4300 ದರ ನಿಗದಿ ಮಾಡಲಾಗಿದ್ದು, ನಗರದಲ್ಲಿ ಆರು ನಿಮಿಷಗಳ ಕಾಲ ಹಾಸನಾಂಬೆ ದೇಗುಲ‌ ವ್ಯಾಪ್ತಿಯಲ್ಲಿ ಹಾರಾಟ ನಡೆಸಲಿದೆ. ಇದೇ ಮೊದಲ ಬಾರಿಗೆ ಹಾಸನಾಂಬೆ ಉತ್ಸವ ಹಿನ್ನೆಲೆ ಹೆಲಿ ಟೂರಿಸಂ ಆಯೋಜಿಸಲಾಗಿದೆ. ಭಕ್ತರಿಗೆ ವಿಭಿನ್ನ ಅನುಭವ ನೀಡಲಿರುವ ಹೆಲಿ ಟೂರಿಸಂ ಜನರು ಎಂಜಾಯ್ ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 03, 2023 09:01 PM