Loading video

ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸುತ್ತಿರುವ ರೈತ ಸಮುದಾಯವನ್ನು ಇವತ್ತು ಭೇಟಿಯಾಗಿ ಮಾತಾಡುತ್ತೇನೆ: ಪರಮೇಶ್ವರ್

Updated on: Jun 02, 2025 | 11:28 AM

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಗಡಿ ಶಾಸಕ ಹೆಚ್​ ಸಿ ಬಾಲಕೃಷ್ಣ ಅವರು ತುಮಕೂರಿನ ಹಾಲು ಮತ್ತು ತರಕಾರಿಯನ್ನು ತಮ್ಮ ಕ್ಷೇತ್ರದ ಕುದೂರಿನಲ್ಲಿ ಮಾರಲು ಬಿಡೋದಿಲ್ಲ ಅಂತ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಅವರು ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ, ವಿಚಾರಿಸುತ್ತೇನೆ ಎಂದ ಪರಮೇಶ್ವರ್ ಸ್ವಾಮೀಜಿಗಳ ವಿರುದ್ಧ ಎಫ್​ಐಅರ್ ದಾಖಲಾಗಿದ್ದೂ ಗೊತ್ತಿಲ್ಲವೆಂದರು.

ಬೆಂಗಳೂರು, ಜೂನ್ 2: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು (Hemavati link canal works ) ಸರ್ಕಾರ ತಾತ್ಕಾಲಿಕಗಾಗಿ ಸ್ಥಗೊತಗೊಳಿಸಿದ್ದರೂ, ರೈತ ಸಮುದಾಯ ಮತ್ತು ಬಿಜೆಪಿ ಶಾಸಕರ ಅಸಮಾಧಾನ ಕಮ್ಮಿಯಾಗಿಲ್ಲ. ವಿಷಯದ ಬಗ್ಗೆ ಮಾತಾಡಿದ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್, ಹಲವಾರು ಸಭೆಗಳನ್ನು ನಡೆಸಿ ತಾಂತ್ರಿಕ ಸಮಿತಿಯೊಂದನ್ನು ರಚಿಸಿ ಸಮಿತಿ ನೀಡಿದ ಶಿಫಾರಸ್ಸಿನೆ ಮೇರೆಗೆ ಕಾಮಗಾರಿಯನ್ನು ಆರಂಭಿಸಲಾಗಿತ್ತು, ಆದರೆ ರೈತರು ಮತ್ತು ಶಾಸಕರು ಅದನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿ ಇವತ್ತು ತಾನು ಅದೇ ಕಾರಣಕ್ಕೆ ತುಮಕೂರುಗೆ ಹೋಗುತ್ತಿರುವುದಾಗಿಯೂ ಮತ್ತು ರೈತ ಸಮುದಾಯದೊಂದಿಗೆ ಮಾತುಕತೆ ನಡೆಸುವುದಾಗಿಯೂ ಹೇಳಿದರು.

ಇದನ್ನೂ ಓದಿ:  ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್: ಕಾಂಗ್ರೆಸ್​ಗೆ ಆಡಳಿತ ಮಾಡಲು ಬರುತ್ತಿಲ್ಲವೆಂದು ಕಿಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ