ನಟಿ, ಗಾಯಕಿ ಬಿ. ಜಯಶ್ರೀಗೆ ಟಿವಿ9 ‘ಹೆಮ್ಮೆಯ ಕನ್ನಡತಿ’ ಜೀವಮಾನ ಸಾಧನೆ ಪ್ರಶಸ್ತಿ
ಬಿ. ಜಯಶ್ರೀ ಅವರಿಗೆ ‘ಹೆಮ್ಮೆಯ ಕನ್ನಡತಿ’ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸನ್ಮಾನ ಮಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ನಂತರ ಜಯಶ್ರೀ ಅವರು ಮಾತನಾಡಿ, ತಮ್ಮ ಬದುಕಿನ ಒಂದು ಅಪರೂಪದ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಹಿರಿಯ ನಟಿ, ಗಾಯಕಿ, ರಂಗಕರ್ಮಿ ಬಿ. ಜಯಶ್ರೀ ಅವರಿಗೆ ‘ಟಿವಿ9 ಹೆಮ್ಮೆಯ ಕನ್ನಡತಿ’ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ. ಈ ವೇದಿಕೆಯಲ್ಲಿ ಅವರು ಅಪರೂಪದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ‘ಏನೇ ಕನ್ನಡತಿ ಆದರೂ ಅವರ ಹಿಂದೆ ಇರುವ ತಾಯಿ ಮಹಾನ್. ಭವಿಷ್ಯ ಅವಳೇ ಇರಬೇಕು ಹೆಮ್ಮೆಯ ಕನ್ನಡತಿ. ಪ್ರತಿಯೊಬ್ಬರಿಗೂ ತಾಯಿಯೇ ಬೆನ್ನುತಟ್ಟಿ ಮುಂದೆ ಕಳಿಸಿದ್ದು’ ಎಂದರು ಜಯಶ್ರೀ.
‘ನನ್ನ ದೊಡ್ಡಮ್ಮನಿಗೆ ದಡಾರ ಬಂದಿತ್ತು. ಆಕೆ ಬದುಕೋದು ಕಷ್ಟ ಆಗಿತ್ತು. ಆಗ ಗುಬ್ಬಿ ಕಂಪನಿಯಲ್ಲಿ ಅಕ್ಕಮಹಾದೇವಿ ನಾಟಕ ಅನೌನ್ಸ್ ಮಾಡಿ ಆಗಿತ್ತು. ದೊಡ್ಡಮ್ಮನೇ ಅಕ್ಕಮಹಾದೇವಿ ಪಾತ್ರ ಮಾಡಬೇಕಿತ್ತು. ಆದರೆ ಅವರು ರಂಗದ ಮೇಲೆ ಹೋಗುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ನಮ್ಮ ತಾಯಿ ಆ ಪಾತ್ರ ಮಾಡುತ್ತೇನೆ ಎಂದರು. ಅದಕ್ಕೆ ನನ್ನ ತಂದೆ ಆಕ್ಷೇಪ ಎತ್ತಿದರು. ರಂಗದ ಮೇಲೆ ಹೋದರೆ ನಿನ್ನನ್ನು ಸುಟ್ಟು ಹಾಕ್ತೀನಿ ಎಂದರು. ಅಂಥ ಭಾಗ್ಯ ನನಗೆ ಸಿಕ್ಕರೆ ನನ್ನಷ್ಟು ಪುಣ್ಯವಂತೆ ಯಾರೂ ಇಲ್ಲ. ನನ್ನನ್ನು ಸುಟ್ಟರೂ ಚಿಂತೆ ಇಲ್ಲ, ಇಂದು ನಾಟಕ ನಡೆಯಬೇಕು ಎಂದು ಹೇಳಿ ನನ್ನ ತಾಯಿ ರಂಗದ ಮೇಲೆ ಹೋದರು. ಇದು ನನ್ನಲ್ಲೂ ಒಂದು ರೀತಿಯ ಕಿಚ್ಚು ತಂದಿತು ಎನಿಸುತ್ತದೆ. ಎಲ್ಲ ತಾಯಂದಿರಿಗೆ, ಎಲ್ಲ ಕಲಾವಿದರಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ’ ಎಂದು ಬಿ. ಜಯಶ್ರೀ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಹೋಟೆಲ್ನ ಕೊನೆಯ ಮಹಡಿಯ ಸ್ವಿಮ್ಮಿಂಗ್ ಪೂಲ್ನಲ್ಲಿ ಮಲಗಿದ್ದ ಜೋಡಿ

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಮೋದಿ ಭೇಟಿ

ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ

ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
