ರಾಜ್ಯದ ಹೆಣ್ಣು ಮಕ್ಕಳಿಗೆ ಈ ಪ್ರಶಸ್ತಿ ಅರ್ಪಣೆ: ಹೆಮ್ಮೆಯ ಕನ್ನಡತಿ ರಚಿತಾ ರಾಮ್ ಮಾತು
ಜನಪ್ರಿಯ ನಟಿ ರಚಿತಾ ರಾಮ್ ಅವರು ‘ಟಿವಿ9 ಹೆಮ್ಮೆಯ ಕನ್ನಡತಿ’ ಪ್ರಶಸ್ತಿ ಪಡೆದಿದ್ದಾರೆ. ವೇದಿಕೆಯಲ್ಲಿ ಅವರು ಮಾತನಾಡಿ, ಈ ಪ್ರಶಸ್ತಿಯನ್ನು ರಾಜ್ಯದ ಪ್ರತಿಯೊಬ್ಬ ಹೆಣ್ಣು ಮಗಳಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ‘ನಾನು ಚಿತ್ರರಂಗದಲ್ಲಿ ಇರುವಷ್ಟು ದಿನ ನಿಮ್ಮನ್ನು ಮನರಂಜಿಸುತ್ತೇನೆ. ಎಂದಿಗೂ ನಿಮ್ಮ ಬೆಂಬಲ ಇರಲಿ’ ಎಂದು ರಚಿತಾ ರಾಮ್ ಹೇಳಿದ್ದಾರೆ.
ರಚಿತಾ ರಾಮ್ ಅವರು ‘ಹೆಮ್ಮೆಯ ಕನ್ನಡತಿ’ ಪ್ರಶಸ್ತಿ ಪಡೆದು, ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ನನ್ನ ಜರ್ನಿ ವಿಟಿ ನೋಡಿದಾಗ ತುಂಬ ಖುಷಿ ಆಗುತ್ತದೆ. ಈ 11-12 ವರ್ಷದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ವೇದಿಕೆಯಲ್ಲಿ ಬಂದು ಇಂಥ ಪ್ರತಿಷ್ಠಿತ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮೆಲ್ಲರ ಜೊತೆ ನನ್ನ ವಿಟಿ ನೋಡಿದ್ದಕ್ಕೆ ಹೆಮ್ಮೆ ಆಗುತ್ತಿದೆ. ಅವಾರ್ಡ್ಗಿಂತಲೂ ಟಿವಿ9 ಸಂಸ್ಥೆ ನನಗೆ ನೀಡುತ್ತಿರುವ ಮೆಚ್ಚುಗೆ ಇದು. ನನ್ನ ಕೆಲಸ ನೋಡಿ ಬೆನ್ನು ತಟ್ಟುತ್ತಿರುವ ಸಂದರ್ಭ ಇದು. ಟಿವಿ9 ವಾಹಿನಿಗೆ ಧನ್ಯವಾದಗಳು. ಮಾಧ್ಯಮದ ಕಡೆಯಿಂದ ಪ್ರಶಸ್ತಿ ಬರುವುದು ದೊಡ್ಡ ವಿಷಯ. ಚಿತ್ರರಂಗದ ಎಲ್ಲರ ಜೊತೆ ಕೆಲಸ ಮಾಡಿದ ಹೆಮ್ಮೆ ನನಗೆ ಇದೆ’ ಎಂದಿದ್ದಾರೆ ರಚಿತಾ ರಾಮ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 22, 2025 09:31 PM
Latest Videos