‘ಟಿವಿ9 ಹೆಮ್ಮೆಯ ಕನ್ನಡತಿ ಪ್ರಶಸ್ತಿ’ ಪಡೆದ ಖ್ಯಾತ ಗಾಯಕಿ ಸಂಗೀತಾ ಕಟ್ಟಿ
‘ಈ ಪ್ರಶಸ್ತಿಗೆ ನನ್ನನ್ನು ನೆನಪಿಸಿಕೊಂಡು, ಇಲ್ಲಿಗೆ ಕರೆಸಿ ಆತ್ಮೀಯವಾದ ಗೌರವವನ್ನು ನೀಡಿದ್ದಕ್ಕೆ ಟಿವಿ9 ವಾಹಿನಿಗೆ ಧನ್ಯವಾದಗಳು. ನಾನು ಯಾವಾಗಲೂ ಋಣಿಯಾಗಿ ಇರುತ್ತೇನೆ. ನನ್ನ ತಂದೆಗೆ ಬಹಳ ಖುಷಿ ಆಗಿದೆ. ಅವರು ಧಾರವಾಡದಿಂದ ಇಲ್ಲಿಗೆ ಬಂದಿದ್ದಾರೆ. ಅವರಿಗೆ 83 ವರ್ಷ’ ಎಂದಿದ್ದಾರೆ ಸಂಗೀತಾ ಕಟ್ಟಿ.
ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರಿಗೆ ಟಿವಿ9 ‘ಹೆಮ್ಮೆಯ ಕನ್ನಡತಿ’ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ‘ಸಂತೋಷ, ಅಭಿಮಾನ, ಹೆಮ್ಮೆ ಎಲ್ಲವೂ ಒಟ್ಟಿಗೆ ಉಕ್ಕಿ ಬರುತ್ತಿದೆ. ನಾನು ಕನ್ನಡದ ಮಗಳು. ನಿಮ್ಮ ಬೆಂಬಲದಿಂದ, ನಿಮ್ಮ ಅಭಿಮಾನದ ಚಪ್ಪಾಳೆಯಿಂದ ಬೆಳೆದೆ. ನನ್ನ ಪಯಣ 4ನೇ ವಯಸ್ಸಿಗೆ ಶುರುವಾಯಿತು. ಇದು ನನ್ನ 50ನೇ ವರ್ಷ. ನನಗೆ ನಂಬಿಕೆ ಬರುವುದಿಲ್ಲ. ನಾನು ಏನು ಹಾಡಿದ್ದೇನೆ, ಏನು ಮಾಡಿದ್ದೇನೆ ಗೊತ್ತಿಲ್ಲ. ಸಾಧನೆ ಮಾಡಬೇಕು ಅಂತ ಈಗ ಅನಿಸುತ್ತಿದೆ. ಆ ಸಾಧನೆಗೆ ಈ ಪ್ರಶಸ್ತಿ ಬುನಾದಿ ಆಗುತ್ತದೆ’ ಎಂದು ಸಂಗೀತಾ ಕಟ್ಟಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?

