TV9 Hemmeya Kannadathi: ದೇವದಾಸಿಯಾಗಬೇಕಿದ್ದ ಅಕ್ಕ ಕ್ಯಾನ್ಸರ್ ತಜ್ಞೆಯಾದ ಸಾಧನೆ ಬಿಚ್ಚಿಟ್ಟ ಡಾ. ವಿಜಯಲಕ್ಷ್ಮೀ ದೇಶಮಾನೆ ತಂಗಿ ಸಮತಾ
60 ವರ್ಷದ ಹಿಂದೆ ಅಕ್ಕನನ್ನು ದೇವದಾಸಿಯನ್ನಾಗಿ ಮಾಡಲು ಜನರು ಬಂದಿದ್ದರು. ಆಗ ನನ್ನಮ್ಮ ನನ್ನ ಮಕ್ಕಳನ್ನು ಓದಿಸಿ, ದೊಡ್ಡ ಮನುಷ್ಯರನ್ನಾಗಿ ಮಾಡುತ್ತೇನೆಂದು ಸವಾಲು ಹಾಕಿ ನಮ್ಮನ್ನು ಓದಿಸಿದರು. ನಾವು 7 ಜನ ಅಕ್ಕ-ತಂಗಿಯರೂ ಪಿಎಚ್ಡಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅಕ್ಕನಿಗೆ ಕಾಲೇಜಿನ ಶುಲ್ಕ ವಿಧಿಸಲು ಹಣವಿಲ್ಲದಿದ್ದಾಗ ಅಮ್ಮ ಗಂಡ ಬದುಕಿದ್ದರೂ 60 ವರ್ಷದ ಹಿಂದೆಯೇ ತನ್ನ ತಾಳಿಯನ್ನೇ ಬಿಚ್ಚಿ ಕೊಟ್ಟಿದ್ದರು. ಆ ತಾಯಿಯ ತ್ಯಾಗಕ್ಕೆ ಈ ಪ್ರಶಸ್ತಿಯನ್ನು ನಾನು ಎಲ್ಲ ಅಮ್ಮಂದಿರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.
ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಟಿವಿ9 ಕನ್ನಡ ಹೆಮ್ಮೆಯ ಕನ್ನಡತಿ ಎಂಬ ಪ್ರಶಸ್ತಿಯನ್ನು ನೀಡುತ್ತಿದೆ. ಆ ಪ್ರಶಸ್ತಿಗೆ ಈ ಬಾರಿ 9 ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಅವರಲ್ಲಿ ಖ್ಯಾತ ಕ್ಯಾನ್ಸರ್ ರೋಗ ತಜ್ಞೆ ವಿಜಯಲಕ್ಷ್ಮೀ ದೇಶಮಾನೆ ಕೂಡ ಒಬ್ಬರು. ಡಾ. ವಿಜಯಲಕ್ಷ್ಮೀ ದೇಶಮಾನೆ ಅವರ ಬದಲು ಅವರ ತಂಗಿ ಸಮತಾ ದೇಶಮಾನೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ವೇಳೆ ಅಕ್ಕನ ಪರವಾಗಿ ಮಾತನಾಡಿದ ಸಮತಾ ದೇಶಮಾನೆ, ನನ್ನ ಅಕ್ಕನನ್ನು ದೇವದಾಸಿಯನ್ನಾಗಿ ಮಾಡಬೇಕೆಂದುಕೊಂಡಿದ್ದರು. 60 ವರ್ಷದ ಹಿಂದೆ ಅಕ್ಕನನ್ನು ದೇವದಾಸಿಯನ್ನಾಗಿ ಮಾಡಲು ಜನರು ಬಂದಿದ್ದರು. ಆಗ ನನ್ನಮ್ಮ ನನ್ನ ಮಕ್ಕಳನ್ನು ಓದಿಸಿ, ದೊಡ್ಡ ಮನುಷ್ಯರನ್ನಾಗಿ ಮಾಡುತ್ತೇನೆಂದು ಸವಾಲು ಹಾಕಿ ನಮ್ಮನ್ನು ಓದಿಸಿದರು. ನಾವು 7 ಜನ ಅಕ್ಕ-ತಂಗಿಯರೂ ಪಿಎಚ್ಡಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅಕ್ಕನಿಗೆ ಕಾಲೇಜಿನ ಶುಲ್ಕ ವಿಧಿಸಲು ಹಣವಿಲ್ಲದಿದ್ದಾಗ ಅಮ್ಮ ಗಂಡ ಬದುಕಿದ್ದರೂ 60 ವರ್ಷದ ಹಿಂದೆಯೇ ತನ್ನ ತಾಳಿಯನ್ನೇ ಬಿಚ್ಚಿ ಕೊಟ್ಟಿದ್ದರು. ಆ ತಾಯಿಯ ತ್ಯಾಗಕ್ಕೆ ಈ ಪ್ರಶಸ್ತಿಯನ್ನು ನಾನು ಎಲ್ಲ ಅಮ್ಮಂದಿರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ