TV9 Hemmeya Kannadathi: ಕೋಲಾರದ ಐಎಎಸ್ ಅಧಿಕಾರಿ ನಂದಿನಿಗೆ ಹೆಮ್ಮೆಯ ಕನ್ನಡತಿ ಗೌರವ
ಕೋಲಾರ ಜಿಲ್ಲೆಯ ಐಎಎಸ್ ಅಧಿಕಾರಿಯಾಗಿರುವ ನಂದಿನಿ ಅವರಿಗೆ ಟಿವಿ9 ಕನ್ನಡದ ಹೆಮ್ಮೆಯ ಕನ್ನಡತಿ ಪ್ರಶಸ್ತಿಯನ್ನು ಸಚಿವ ಕೆ.ಎಚ್. ಮುನಿಯಪ್ಪ ಪ್ರದಾನ ಮಾಡಿದರು. ನಂಬರ್ 1 ಸ್ಥಾನದಲ್ಲಿ ಐಎಎಸ್ ಪರೀಕ್ಷೆ ಪಾಸ್ ಮಾಡಿ ಮಾದರಿಯಾಗಿರುವ ನಂದಿನಿ ಈ ವೇಳೆ ಮಾತನಾಡಿದ್ದು, ಈ ಪ್ರಶಸ್ತಿಯನ್ನು ಪಡೆದ ಪ್ರತಿಯೊಬ್ಬರೂ ಅನರ್ಘ್ಯ ರತ್ನಗಳು ಎಂದಿದ್ದಾರೆ.
ಕೋಲಾರ ಜಿಲ್ಲೆಯ ಐಎಎಸ್ ಅಧಿಕಾರಿಯಾಗಿರುವ ನಂದಿನಿ ಅವರಿಗೆ ಟಿವಿ9 ಕನ್ನಡದ ಹೆಮ್ಮೆಯ ಕನ್ನಡತಿ ಪ್ರಶಸ್ತಿಯನ್ನು ಸಚಿವ ಕೆ.ಎಚ್. ಮುನಿಯಪ್ಪ ಪ್ರದಾನ ಮಾಡಿದರು. ನಂಬರ್ 1 ಸ್ಥಾನದಲ್ಲಿ ಐಎಎಸ್ ಪರೀಕ್ಷೆ ಪಾಸ್ ಮಾಡಿ ಮಾದರಿಯಾಗಿರುವ ನಂದಿನಿ ಈ ವೇಳೆ ಮಾತನಾಡಿದ್ದು, ಈ ಪ್ರಶಸ್ತಿಯನ್ನು ಪಡೆದ ಪ್ರತಿಯೊಬ್ಬರೂ ಅನರ್ಘ್ಯ ರತ್ನಗಳು. ನನ್ನ ಸಾಧನೆಗೆ ಸಮಾಜವೇ ಪ್ರೇರಣೆ. 4 ಬಸ್ ಬದಲಾಯಿಸಿಕೊಂಡು ಕಾಲೇಜಿಗೆ ಹೋಗುತ್ತಿದ್ದೆ. ಆಗ ಜನರ ಜೊತೆ ಬೆರೆಯುವ, ಅವರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಸಿಕ್ಕಿತು. ದಯವಿಟ್ಟು ಹೆಣ್ಣುಮಕ್ಕಳನ್ನು ಚೆನ್ನಾಗಿ ಓದಿಸಿ. ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಹೆಣ್ಣುಮಕ್ಕಳು ಆಮೇಲೆ ಎಲ್ಲಿ ಹೋದರೆಂದೇ ಗೊತ್ತಾಗುತ್ತಿಲ್ಲ. ಅವರು ಸಮಾಜಕ್ಕೆ ಆಸ್ತಿಯಾಗಬೇಕು ಎಂದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Feb 22, 2025 09:06 PM