ಆನೆಗಳ ಒಂದು ಹಿಂಡು ಸಕಲೇಶಪುರದಲ್ಲಿ ಕೆರೆಯೊಂದಕ್ಕೆ ಬಂದು ಆಟವಾಡಿ ಗ್ರೂಪ್ ಫೋಟೋಗೆ ಪೋಸ್ ನೀಡಿದ್ದು!
ಭಾರೀ ಗಾತ್ರದ ಈ ಪ್ರಾಣಿಗಳಿಗೆ ನೀರೆಂದರೆ ಬಹಳ ಪ್ರೀತಿ. ನೀರಿಗಿಳಿದು ಆಡೋದು, ಸೊಂಡಿಲಲ್ಲಿ ನೀರು ತುಂಬಿಕೊಂಡು ಮೈಮೇಲೆ ಹುಯ್ದುಕೊಳ್ಳುವುದು ಇಲ್ಲವೇ ಬೇರೆ ಆನೆಯ ಮೇಲೆ ಸುರಿಯುವುದನ್ನು ಅವು ಮಾಡುತ್ತಿರುತ್ತವೆ. ಜಲಕ್ರೀಡೆಯಲ್ಲಿ ನಿರತವಾಗಿರುವ ಅನೆಗಳನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ.
ಸಕಲೇಶಪುರ (Sakleshpur) ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಪಕ್ಕದ ಕಾಡಿನಿಂದ ಕಾಡಾನೆಗಳು (wild elephants) ಎಂಟ್ರಿಕೊಟ್ಟು ಜನರನ್ನು ಭೀತಿಗೊಳಪಡಿಸುತ್ತಿರುವ ವಿಡಿಯೋಗಳನ್ನು ನಿಮಗೆ ಆಗಾಗ ತೋರಿಸುತ್ತಿರುತ್ತೇವೆ. ಆದರೆ ಈ ಬಾರಿ ನಾವು ಕೇವಲ ಒಂದು ಆನೆಯಲ್ಲ, 20 ಆನೆಗಳ ಹಿಂಡನ್ನು (herd) ತೋರಿಸುತ್ತಿದ್ದೇವೆ. ಹೌದು ಮಾರಾಯ್ರೇ, ಇದು ಆನೆಗಳ ಬಿಗ್ ಫ್ಯಾಮಿಲಿ. ಈ ಕುಟುಂಬದಲ್ಲಿ ಎಲ್ಲ ಇದ್ದಾರೆ; ಮಕ್ಕಳು ಅಪ್ಪ-ಅಮ್ಮ, ಅಣ್ಣ ಅಕ್ಕ, ಚಿಕ್ಕಪ್ಪ-ಚಿಕ್ಕಮ್ಮ! ಆನೆಗಳು ಸಂಘಜೀವಿಗಳು ಮಾರಾಯ್ರೇ. ಗುಂಪುಗಳಲ್ಲಿ ಓಡಾಡುತ್ತವೆ ಮತ್ತು ಚಿಕ್ಕ ಮರಿಗಳ ಬಗ್ಗೆ ದೊಡ್ಡವಕ್ಕೆ ಎಷ್ಟು ಕಾಳಜಿಯೆಂದರೆ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ಮರಿಯಾನೆಗಳನ್ನು ಗುಂಪಿನ ನಡುವೆ ಹಾಕಿಕೊಂಡಿರುತ್ತವೆ!
ವಿಡಿಯೋನಲ್ಲಿ ಕಾಣುತ್ತಿರುವ ಆನೆಗಳ ಹಿಂಡು ಸಕಲೇಶಪುರದ ಬೈಕೆರೆ ಗ್ರಾಮದಲ್ಲಿರುವ ಕೆರೆ ಬಳಿಗೆ ಬಂದಿವೆ. ಭಾರೀ ಗಾತ್ರದ ಈ ಪ್ರಾಣಿಗಳಿಗೆ ನೀರೆಂದರೆ ಬಹಳ ಪ್ರೀತಿ. ನೀರಿಗಿಳಿದು ಆಡೋದು, ಸೊಂಡಿಲಲ್ಲಿ ನೀರು ತುಂಬಿಕೊಂಡು ಮೈಮೇಲೆ ಹುಯ್ದುಕೊಳ್ಳುವುದು ಇಲ್ಲವೇ ಬೇರೆ ಆನೆಯ ಮೇಲೆ ಸುರಿಯುವುದನ್ನು ಅವು ಮಾಡುತ್ತಿರುತ್ತವೆ. ಜಲಕ್ರೀಡೆಯಲ್ಲಿ ನಿರತವಾಗಿರುವ ಅನೆಗಳನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಈ ಗುಂಪಿನಲ್ಲಿ ಚಿಕ್ಕ ಮರಿಗಳೂ ಇದ್ದು ಅವು ನೀರೊಳಗೆ ಇಳಿಯುವ ಸಾಹಸವನ್ನೂ ಮಾಡುತ್ತವೆ.
ನೀರಿನಲ್ಲಿ ಮತ್ತು ನೀರನಿಂದ ಸ್ವಲ್ಪ ಹೊತ್ತು ಆಡಿ ಹೊಟ್ಟೆ ತುಂಬಾ ನೀರು ಕುಡಿದು ಆನೆಗಳು ಅಲ್ಲಿಂದ ಹೊರಡುತ್ತವೆ. ಹೊರಡುವ ಮೊದಲು ಗ್ರೂಪ್ ಫೋಟೋಗೆ ಒಂದು ಪೋಸ್ ನೀಡುತ್ತವೆ. ಥ್ಯಾಂಕ್ಸ್ ಫಾರ್ ದಿ ಎಂಟರ್ಟೇನ್ಮೆಂಟ್ ಆನೆಗಳೇ!
ಇದನ್ನೂ ಓದಿ: ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಪುನಃ ಕಾಡಿಗಟ್ಟಲು ನಾಗರಹೊಳೆಯಿಂದ ಭೀಮ ಮತ್ತು ಅರ್ಜುನ ಬಂದಿದ್ದಾರೆ