ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ

ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ

ರಮೇಶ್ ಬಿ. ಜವಳಗೇರಾ
|

Updated on: Jan 16, 2025 | 9:54 PM

​ಅದು ಬೆಳಗ್ಗೆ 11 ಗಂಟೆ ಸಮಯ..ಅಂಥಾ ಹಾಡಹಗಲಿನ ಹೊತ್ತಲ್ಲೇ ಅಲ್ಲಿ ಗುಂಡಿನ ಮಳೆ ಆಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಬಳಿಯೇ ಗುಂಡಿನ ಮಳೆಗೈದ ಪಾಪಿಗಳು, 83 ಲಕ್ಷ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ಇಬ್ಬರು ದರೋಡೆಕೋರರ ಅಟ್ಟಹಾಸಕ್ಕೆ ಬೀದರ್‌ ನಗರ ನಡುಗಿ ಹೋಗಿದೆ. ಇನ್ನು ಇಬ್ಬರು ಮುಸುಕುಧಾರಿಗಳು ಗುಂಡಿನ ದಾಳಿ ನಡೆಸಿ ಹಣದ ಟ್ರಂಕ್ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೀದರ್, (ಜನವರಿ 16): ಹಾಡಹಗಲಿನ ಹೊತ್ತು…ಬೆಳಗ್ಗೆ 11 ಗಂಟೆಯ ಸಮಯ..ಇಂಥಾ ಹೊತ್ತಲ್ಲೇ ರಾಜ್ಯದ ಮುಕುಟಮಣಿ ಬೀದರ್‌ನಲ್ಲಿ ಭೀಬತ್ಸ ನಡೆದಿದೆ. ನೂರಾರು ಜನರ ನಡುವೆ ದರೋಡೆಕೋರರು ಅಟ್ಟಹಾಸ ಮೆರೆದಿದ್ದಾರೆ. ಕ್ಷಣ ಮಾತ್ರದಲ್ಲಿ ಇಲ್ಲಿ ಹೇಗೆ ದರೋಡೆ ಆಗ್ತಿದೆ ಅನ್ನೋದನ್ನ ನೀವೆ ನೋಡಿ. ನೂರಾರು ಜನ ಇದ್ದಾರೆ ಅನ್ನೋ ಭಯ ಇಲ್ಲ..ಹಾಡಹಗಲಿನ ಹೊತ್ತು ಅನ್ನೋ ಹೆದರಿಕೆ ಇಲ್ಲ..ಸಿಟಿ ಮಧ್ಯದ ಸ್ಥಳ ಅನ್ನೋ ಅಂಜಿಕೆಯೂ ಇಲ್ಲ..ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ನ್ಯಾಯಾಲಯದ ಸನಿಹದಲ್ಲೇ ಅದೇಗೆ ಫೈರಿಂಗ್‌ ಮಾಡ್ತಾರೆ ನೋಡಿ. ಹೀಗೆ ಇಬ್ಬರ ಮೇಲೆ ಗುಂಡು ಹಾರಿಸಿದವರು, 83 ಲಕ್ಷ ಹಣ ಇರೋ ಬಾಕ್ಸ್‌ನೊಂದಿಗೆ ಎಸ್ಕೇಪ್ ಆಗಿದ್ರು. ಅದೂ ಸಾಮಾನ್ಯ ಬೈಕ್‌ನಲ್ಲಿ. ಇಂಥಾ ಕೃತ್ಯ ಕಣ್ಣೆದುರೇ ನಡೆದ್ರೂ ಬೀದರ್‌ ನಗರದ ಜನ ಮೂಕ ಸಾಕ್ಷಿ ಆಗಿ ನಿಂತಿದ್ರು.

ಅಂದಹಾಗೆ ಎಟಿಎಂಗಳಿಗೆ ಹಣ ತುಂಬುವ ಜವಾಬ್ದಾರಿ ಹೊತ್ತಿರೋ ಸಿಎಂಎಸ್‌ ಕಂಪನಿ ಸಿಬ್ಬಂದಿ ಬೀದರ್‌ ನಗರದ ಶಿವಾಜಿ ಚೌಕ್‌ನಲ್ಲಿರೋ ಬ್ಯಾಂಕ್‌ನಲ್ಲಿ ಹಣ ತುಂಬಿಕೊಂಡಿದ್ದಾರೆ. ಅಲ್ಲಿ ಇರೋ ಎಟಿಎಂಗೆ ಒಂದಿಷ್ಟು ಹಣ ತುಂಬಿ ಬಾಕ್ಸ್‌ನನ್ನ ಮತ್ತೇ ವಾಹನಕ್ಕೆ ಇಡ್ತಿದ್ರು. ಬೆಳಗ್ಗೆ 10.55 ರ ಅದೇ ಹೊತ್ತಿನಲ್ಲಿ ಅಲ್ಲಿಗೆ ಎಂಟ್ರಿಕೊಟ್ಟಿದ್ದ ಇಬ್ಬರು ದರೋಡೆಕೋರರು, ನೋಡ ನೋಡ್ತಿದ್ದಂತೆ ಫೈರಿಂಗ್‌ ಮಾಡಿದ್ರು. ಗಿರಿ ವೆಂಕಟೇಶ್ ಹಾಗೂ ಶಿವಕುಮಾರ್‌ ಅನ್ನೋ ಸಿಬ್ಬಂದಿ ನೆಲಕ್ಕೆ ಉರುಳುತ್ತಿದ್ದಂತೆ ಹಣದ ಬಾಕ್ಸ್‌ನೊಂದಿಗೆ ಎಸ್ಕೇಪ್ ಆಗಿದ್ದಾರೆ. ಇನ್ನು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಣದ ಟ್ರಂಕ್​ ಎತ್ತಲು ಆಗದೇ ಬಿದ್ದಿದ್ದಾರೆ. ಅಂಗೋ ಹಿಂಗೋ ಕಸರತ್ತು ಮಾಡಿ ಹಣದ ಟ್ರಂಕ್ ಬೈಕ್​ನಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗಿದ್ದಾರೆ.