ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್ ಗಣೇಶ್ಗೆ ಅವಿನಾಭಾವ ಸಂಬಂಧ
ಹೊಸ ತುಳು ಸಿನಿಮಾಗೆ ‘ಗೋಲ್ಡನ್ ಮೂವೀಸ್’ ಮೂಲಕ ಶಿಲ್ಪಾ ಗಣೇಶ್ ಅವರು ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಟ ಗಣೇಶ್ ಅವರು ಮಾತನಾಡಿದ್ದಾರೆ. ಇದೇ ಸಿನಿಮಾದಲ್ಲಿ ಫ್ಯಾಮಿಲಿ ಡ್ರಾಮಾ ಹಾಗೂ ಕಾಮಿಡಿ ಇರಲಿದೆ. ಈ ಬಗ್ಗೆ ಗಣೇಶ್ ಅವರು ಸಂತಸ ಹಂಚಿಕೊಂಡಿದ್ದಾರೆ.
‘ನನಗೂ ಮತ್ತು ಮಂಗಳೂರಿಗೂ ಅವಿನಾಭಾವ ಸಂಬಂಧ ಇದೆ. ನನ್ನ ಮೊದಲ ಸಿನಿಮಾದ ನಿರ್ಮಾಪಕರು, ನಿರ್ದೇಶಕರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು ಮಂಗಳೂರು ಭಾಗದವರು. ನಾನು ಮದುವೆ ಆಗಿದ್ದೂ ಮಂಗಳೂರಿನವರನ್ನು. ನಾನು ಚೆಲ್ಲಾಟ ಸಿನಿಮಾ ಮಾಡಿದಾಗ ನನಗೆ 24, 25 ವರ್ಷ ವಯಸ್ಸು. ಈ ಭಾಗದಿಂದ ನನಗೆ ಅನೇಕ ಪತ್ರಗಳು ಬರುತ್ತಿದ್ದವು. ಮಂಗಳೂರಿಗೆ ಬರಲು ನನಗೆ ಯಾವಾಗಲೂ ಇಷ್ಟ ಆಗುತ್ತದೆ’ ಎಂದು ಗಣೇಶ್ ಹೇಳಿದ್ದಾರೆ. ಗಣೇಶ್ ಪತ್ನಿ ಶಿಲ್ಪಾ ಅವರು ಈಗ ತುಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos