ರಮೇಶ್ ಜಾರಕಿಹೊಳಿ ಮಾತಾಡಿದ್ದನ್ನೆಲ್ಲ ಪಕ್ಷದ ವರಿಷ್ಠರಿಗೆ ವರದಿ ಮಾಡಿಯಾಗಿದೆ: ಆರ್ ಅಶೋಕ
ಕೇಂದ್ರ ಬಿಜೆಪಿ ಶಿಸ್ತು ಸಮಿತಿಯು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಕಡಿವಾಣ ಹಾಕಿದ ಬಳಿಕ ಅವರ ಬದಲಿಗೆ ರಮೇಶ್ ಜಾರಕಿಹೊಳಿ ವಿಜಯೇಂದ್ರ ಮತ್ತು ಯಡಿಯೂರಪ್ಪರನ್ನು ತೆಗಳುವ ಕಾರ್ಯ ಶುರುಮಾಡಿದಂತಿದೆ. ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು ಬಿಜೆಪಿ ಸೇರಿ ಮಿನಿಸ್ಟ್ರಾಗಿದ್ದು ಹಳೆಯ ವಿಚಾರ. ಅವರು ಎಷ್ಟು ಆಳವಾಗಿ ಮತ್ತು ಭದ್ರವಾಗಿ ಬಿಜೆಪಿಯಲ್ಲಿ ಕಾಲೂರಿದ್ದಾರೆ ಅನ್ನೋದು ಚರ್ಚೆಯ ವಿಚಾರ.
ಬೆಂಗಳೂರು: ರಮೇಶ್ ಜಾರಕಿಹೊಳಿ ನಿನ್ನೆ ಬೆಳಗಾವಿಯಲ್ಲಿ ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ ಬಗ್ಗೆ ಮಾತಾಡಿದ್ದು ಬಿಜೆಪಿ ಪ್ರಮುಖ ನಾಯಕರನ್ನು ವ್ಯಗ್ರರನ್ನಾಗಿಸಿದೆ.. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ, ಪಕ್ಷದ ಶಿಸ್ತಿನ ಸಿಪಾಯಿ ಅಗಿರುವ ತಾನು ಪಕ್ಷದ ಚೌಕಟ್ಟಿನೊಳಗೆ ಮಾತಾಡುತ್ತೇನೆ, ತನಗೆ ಕಂಡುಬಂದ ಎಲ್ಲ ವಿದ್ಯಮಾನಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ, ನಿರ್ಧಾರ ಅವರು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಸಿದ್ದರಾಮಯ್ಯಗೆ ಜಾತಿ ಜನಗಣತಿ ನೆನಪಾಗುತ್ತೆ: ಆರ್ ಅಶೋಕ್
Latest Videos