‘ಜೇಮ್ಸ್’ ರಿಲೀಸ್ ದಿನಾಂಕದ ಬಗ್ಗೆ ಮಾಹಿತಿ ನೀಡಿದ ಸಿನಿಮಾ ವಿತರಕ ಧೀರಜ್
ಪುನೀತ್ ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ (James Movie) ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಇದರ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿತ್ತು. ಸಿನಿಮಾ ಮಾರ್ಚ್ 17ರಂದು ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿತರಕ ಧೀರಜ್ ಅವರು ಮಾತನಾಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನೋವು ಸದ್ಯಕ್ಕೆ ಮರೆಯುವಂತಹದ್ದಲ್ಲ. ಅವರು ಅಗಲಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಪುನೀತ್ ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ (James Movie) ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಇದರ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿತ್ತು. ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇದೆ. ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರು ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ವಿಶೇಷ. ಸಿನಿಮಾ ಮಾರ್ಚ್ 17ರಂದು ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿತರಕ ಧೀರಜ್ ಅವರು ಮಾತನಾಡಿದ್ದಾರೆ. ಆ್ಯಕ್ಷನ್ ಸಿನಿಮಾಗಳ ಮೂಲಕ ಫೇಮಸ್ ಆಗಿರುವವರು ನಿರ್ದೇಶಕ ಚೇತನ್ ಕುಮಾರ್. ಅದೇ ರೀತಿ, ಪುನೀತ್ ರಾಜ್ಕುಮಾರ್ ಸಿನಿಮಾಗಳಲ್ಲೂ ಭರ್ಜರಿ ಆ್ಯಕ್ಷನ್ ಇದ್ದೇ ಇರುತ್ತದೆ. ಇದೇ ಮೊದಲ ಬಾರಿಗೆ ಇವರಿಬ್ಬರ ಕಾಂಬಿನೇಷನ್ನಲ್ಲಿ ‘ಜೇಮ್ಸ್’ ಮೂಡಿಬರುತ್ತಿದೆ. ಹಾಗಾಗಿ ನಿರೀಕ್ಷೆ ಹೆಚ್ಚಿದೆ. ಸಿನಿಮಾದ ಮೇಕಿಂಗ್ ಗುಣಮಟ್ಟ ಕೂಡ ಅದ್ದೂರಿಯಾಗಿ ಇರಲಿದೆ.
ಇದನ್ನೂ ಓದಿ: David Warner: ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಂದ ಡೇವಿಡ್ ವಾರ್ನರ್ಗೆ ವಿಶೇಷ ಬೇಡಿಕೆ: ಈಡೇರಿಸ್ತಾರ ಆಸೀಸ್ ಕ್ರಿಕೆಟಿಗ?
ಪುನೀತ್ ರಾಜ್ಕುಮಾರ್ ಹೆಸರಲ್ಲಿ ಮಹಾರಾಷ್ಟ್ರ ಅನಾಥಾಶ್ರಮದಲ್ಲಿ ಅನ್ನದಾನ